ವಾರಣಾಸಿ : ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಪ್ರಕರಣದಲ್ಲಿ ಮಸೀದಿ ಸಮಿತಿಯ ಪರ ವಾದ ಮಾಡುತ್ತಿದ್ದ ವಕೀಲ ಅಭಯ್ನಾಥ್ ಯಾದವ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 62 ವರ್ಷದ ಅಭಯ್ನಾಥ್ ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಜ್ಞಾನವಾಪಿ ಮಸೀದಿಯಲ್ಲಿ ಹಿಂದು ದೇವರ ವಿಗ್ರಹಗಳು ಮತ್ತು ದೇವಸ್ಥಾನದ ಕುರುಹುಗಳಿವೆ ಎಂದು ಪ್ರತಿಪಾದಿಸಲಾಗಿದೆ. ಸೆಷನ್ಸ್ ಕೋರ್ಟ್ ಮಸೀದಿಯಲ್ಲಿ ಜಂಟಿ ಸಮೀಕ್ಷೆ ನಡೆಸಲು ಸೂಚಿಸಿತ್ತು. ಕೋರ್ಟ್ನಿಂದ ನೇಮಕವಾದ ಸಮಿತಿ ಸಮೀಕ್ಷೆ ನಡೆಸುವಾಗ ನೀರಿನ ಕಾರಂಜಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ವರದಿಯಾಗಿತ್ತು. ಮಸೀದಿಯ ಪೂರ್ವ ಭಾಗದ ಗೋಡೆಯಲ್ಲಿ ದೇವರ ವಿಗ್ರಹಗಳಿರುವುದರಿಂದ ಪ್ರಾರ್ಥನೆ ಪೂಜೆಗೆ ಅವಕಾಶ ನೀಡಬೇಕು ಎಂದು ಹಲವು ಹಿಂದು ಮಹಿಳೆಯರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಅಂಜುಮಾನ್ ಇಂತೇಝಮಿಯಾ ಮಸೀದಿ ಸಮಿತಿ ಪರವಾಗಿ ಹಿರಿಯ ವಕೀಲರಾದ ಅಭಯ್ ನಾಥ್ ವಾದಿಸುತ್ತಿದ್ದರು. ಅಲಹದಾಬಾದ್ ಹೈಕೋರ್ಟ್ ಕಳೆದ ವಾರ ಪ್ರಕರಣದ ವಿಚಾರಣೆ ನಡೆಸಿ, ಮುಂದಿನ ವಿಚಾರಣೆಯನ್ನು ಆ.3 ರಂದು ನಿಗದಿ ಮಾಡಿದೆ.
ಜ್ಞಾನವ್ಯಾಪಿ ಪ್ರಕರಣ : ಮಸೀದಿ ಪರ ವಾದಿಸುತ್ತಿದ್ದ ವಕೀಲ ಅಭಯ್ನಾಥ್ ಯಾದವ್ ನಿಧನ
Recent Comments
ಕಗ್ಗದ ಸಂದೇಶ
on