Friday, August 19, 2022
spot_img
Homeಸುದ್ದಿಯುವ ಮೋರ್ಚಾದವರ ರಾಜೀನಾಮೆ ಟಿವಿಯಲ್ಲಿ ಬರಲು ಆಡಿದ ನಾಟಕ

ಯುವ ಮೋರ್ಚಾದವರ ರಾಜೀನಾಮೆ ಟಿವಿಯಲ್ಲಿ ಬರಲು ಆಡಿದ ನಾಟಕ

ಬಿಜೆಪಿ ಸಂಸದ ಸಿದ್ಧೇಶ್ವರ ವಿವಾದಾತ್ಮಕ ಹೇಳಿಕೆ

ದಾವಣಗೆರೆ :ಸುಳ್ಯದ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರದ ನಿಷ್ಟ್ಕಿಯತೆಯನ್ನು ಪ್ರತಿಭಟಿಸಿ ಯುವ ಮೋರ್ಚಾ ಪದಾಧಿಕಾರಿಗಳು ನೀಡುತ್ತಿರುವ ರಾಜೀನಾಮೆ ಟಿವಿಯಲ್ಲಿ ಮುಖ ತೋರಿಸಲು ಮಾಡುತ್ತಿರುವ ನಾಟಕ ಎಂದು ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ.
ರಾಜೀನಾಮೆ ಕೊಟ್ಟರೆ ಪಕ್ಷ ಮುಳುಗಿ ಹೋಗಲ್ಲ. 11 ಕೋಟಿ ಜನ ಬಿಜೆಪಿಯಲ್ಲಿದ್ದಾರೆ. ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ನಾನು ಇದ್ದೇನೆ. ರಾಜೀನಾಮೆ ಕೊಟ್ಟ ಮಾತ್ರಕ್ಕೆ ಅದು ಸ್ವೀಕೃತ ಆಗಲ್ಲ ಎಂದರು.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಸರ್ಕಾರ ಕ್ರಮ ಕೈಗೊಂಡಿದೆ. ಈ ವಿಚಾರದಲ್ಲಿ ಯುವ ಮೋರ್ಚಾ ಸದಸ್ಯರ ರಾಜೀನಾಮೆ ಪ್ರಶ್ನೆಯೇ ಉದ್ಬವಿಸದು. ನಮಗ್ಯಾರಿಗೂ ರಾಜೀನಾಮೆ‌ ಕೊಟ್ಟಿಲ್ಲ.‌ ಟಿವಿಯಲ್ಲಿ ಬರುತ್ತೇವೆ ಎನ್ನುವ ಕಾರಣಕ್ಕೆ ಕೆಲವರು ರಾಜೀನಾಮೆ‌ ನಾಟಕ‌ ಆಡಿರಬಹುದು ಎಂದರು.
ಸರ್ಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡುವುದಾಗಿ ಹೇಳಿದ್ದ ರೇಣುಕಾಚಾರ್ಯ ಅಭಿಪ್ರಾಯವೇ ಬೇರೆ. ಬೇರೆಯವರು ಹಾಗೆ ಹೇಳಿದ್ದಾರೆ, ನೀವೇನು ಹೇಳುತ್ತೀರಾ ಎಂಬ ಪ್ರಶ್ನೆ ಕೇಳಿ ನಮ್ಮ ನಮ್ಮಲ್ಲೇ ಗುದ್ದಾಟ ಹಚ್ಚುತ್ತೀರಾ? ಇಂಥ ಕೆಲಸ‌ ‌ಮಾಡಬೇಡಿ ಎಂದು‌ ಮಾಧ್ಯಮದವರಿಗೆ ಸಲಹೆ ನೀಡಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!