ಕೆಸಿಇಟಿ ಇಂಜಿನಿಯರಿಂಗ್‌ನಲ್ಲಿ ಜ್ಞಾನಸುಧಾದ ಸ್ತುತಿ ಎಸ್. ಉಡುಪಿ ಜಿಲ್ಲೆಗೆ ಪ್ರಥಮ – ಸನ್ಮಾನ

ಕಾರ್ಕಳ : ಕೆಸಿಇಟಿ ಇಂಜಿನಿಯರಿಂಗ್ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಕು. ಸ್ತುತಿ ಎಸ್. 40ನೇ ರ್‍ಯಾಂಕ್‌ ಗಳಿಸಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಅವರ ಸಾಧನೆಗಾಗಿ ಕಾರ್ಕಳ ಜ್ಞಾನಸುಧಾ ಸಂಸ್ಥೆಯಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ ವತಿಯಿಂದ ಡಾ. ಸುಧಾಕರ್ ಶೆಟ್ಟಿ ಸನ್ಮಾನಿಸಿದರು. ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಪ್ರಸಾದ್ ರಾವ್, ಉದ್ಯಮಿ ದೇವೇಂದ್ರ ನಾಯಕ್, ಕಾಲೇಜಿನ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಸಾರ್ವಜನಿಕ ಸಂಪರ್ಕಾಧಿಕಾರಿ, ವಿವಿಧ ವಿಭಾಗದ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಮೋಘ ಸಾಧನೆ

ನಿಟ್ಟೆಯ ಸುರೇಂದ್ರ ಪೂಜಾರಿ ಹಾಗೂ ಪ್ರಶಾಂತಿ ದಂಪತಿ ಪುತ್ರಿಯಾಗಿರುವ ಸ್ತುತಿ ಎಸ್.‌ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 5 ವಿಷಯಗಳಲ್ಲಿ ನೂರಕ್ಕೆ ನೂರು ಅಂಕದೊಂದಿಗೆ 593 ಅಂಕ ಪಡೆದಿದ್ದರು. ಈ ಮೂಲಕ ರಾಜ್ಯಕ್ಕೆ 6 ನೇ ರ್‍ಯಾಂಕ್‌, ಕಾಮೆಡ್-ಕೆ 2022 ರಲ್ಲಿ ರಾಷ್ಟ್ರಮಟ್ಟದಲ್ಲಿ 85ನೇ ರ್‍ಯಾಂಕ್‌, ಇಂಜಿನಿಯರಿಂಗ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆ.ಇ.ಇ. ಮೈನ್ ಮೊದಲ ಹಂತದ ಪರೀಕ್ಷೆಯಲ್ಲಿ 99.16 ಪರ್ಸೆಂಟೈಲ್ ಗಳಿಸಿ ಅಮೋಘ ಸಾಧನೆ ಮಾಡಿರುತ್ತಾರೆ.





























































































































































































































error: Content is protected !!
Scroll to Top