ಬೆಂಗಳೂರು: ದಾವಣಗೆರೆಯಲ್ಲಿ ಆ.3ರಂದು ನಡೆಯಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಜನ್ಮದಿನ ಆಚರಣೆ ಸಿದ್ದರಾಮೋತ್ಸವಕ್ಕೆ ಈಗಾಗಲೇ 300ಕ್ಕೂ ಅಧಿಕ ಸಾರಿಗೆ ಬಸ್ಗಳನ್ನು ಬುಕ್ ಮಾಡಲಾಗಿದೆ. ಇನ್ನೂ ನೂರಾರು ಬಸ್ಗಳು ಬುಕ್ ಆಗಲಿವೆ.
ಎಲ್ಲ ಜಿಲ್ಲೆಗಳ ಡಿಪೋಗಳಿಂದ ಬಸ್ಗಳು ಬುಕ್ ಆಗಿವೆ. ಸಿದ್ದರಾಮೋತ್ಸವ ಜನ್ಮದಿನ ಆಚರಣೆ ಸಾರಿಗೆ ಇಲಾಖೆಗೆ ಭರ್ಜರಿ ಆದಾಯ ತಂದುಕೊಡಲಿದೆ.
ಭಾರಿ ವೈಭವದಿಂದ ಸಿದ್ದರಾಮೋತ್ಸವ ಆಚರಿಸುವ ಸಿದ್ಧತೆಗಳು ಅಂತಿಮ ಘಟ್ಟಕ್ಕೆ ತಲುಪಿವೆ. ಸರ್ಕಾರಿ ಬಸ್ಗಳಲ್ಲದೆ ಸಾವಿರಾರು ಖಾಸಗಿ ವಾಹನಗಳು ಬುಕ್ ಆಗಿವೆ. ಆ.3ರಂದು ರಾಜ್ಯದ ಎಲ್ಲ ರಸ್ತೆಗಳು ದಾವಣಗೆರೆಯತ್ತ ಮುಖ ಮಾಡಬೇಕೆಂಬ ನಿಟ್ಟಿನಲ್ಲಿ ಜನ ಸೇರಿಸಲು ನಾಯಕರು ಹಗಲಿರುಳು ಶ್ರಮಿಸುತ್ತಿದ್ದಾರೆ.
ಸಿದ್ದರಾಮೋತ್ಸವಕ್ಕೆ ನೂರಾರು ಬಸ್ ಬುಕ್ಕಿಂಗ್
Recent Comments
ಕಗ್ಗದ ಸಂದೇಶ
on