ಮಂಗಳೂರು : ಕಾಂಗ್ರೆಸ್ ಶಾಸಕ , ವಿಧಾನಸಭೆಯ ಪ್ರತಿಪಕ್ಷ ನಾಯಕ ಯು.ಟಿ. ಖಾದರ್ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಲು ಶುಕ್ರವಾರ ಬೆಳ್ಳಾರೆಗೆ ಆಗಮಿಸಿದ್ದರು. ಆದರೆ ಪ್ರವೀಣ್ ಕುಟುಂಬದವರು ಖಾದರ್ ಭೇಟಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಖಾದರ್ ನೆಟ್ಟಾರು ವೃತ್ತದಿಂದಲೇ ವಾಪಸಾಗಿದ್ದಾರೆ. ಸತತ ಮೂರು ದಿನಗಳಿಂದ ರಾಜಕೀಯ ನಾಯಕರ ಸಹಿತ ಹಲವು ಮಂದಿ ಭೇಟಿಗೆ ಬರುತ್ತಿರುವುದರಿಂದ ಮನೆಯವರಿಗೆ ವಿಶ್ರಾಂತಿ ಇಲ್ಲದಂತಾಗಿದೆ. ಹೀಗಾಗಿ ಮನೆಯವರಿಗೆ ತೊಂದರೆ ಕೊಡುವುದು ಬೇಡ ಎಂದು ಅರ್ಧ ದಾರಿಯಿಂದ ವಾಪಾಸಾಗಿದ್ದೇನೆ ಎಂದು ಖಾದರ್ ಬಳಿಕ ಮಾಧ್ಯಮದವರ ಬಳಿ ಹೇಳಿಕೊಂಡಿದ್ದಾರೆ.
