Friday, August 19, 2022
spot_img
Homeರಾಜ್ಯಲಿಫ್ಟ್‌ನಲ್ಲೇ ಪತ್ನಿಗೆ ತಲಾಖ್ ನೀಡಿದ ಪತಿ

ಲಿಫ್ಟ್‌ನಲ್ಲೇ ಪತ್ನಿಗೆ ತಲಾಖ್ ನೀಡಿದ ಪತಿ

ಬೆಂಗಳೂರು : ಲಿಫ್ಟ್‌ನಲ್ಲೇ ಪತ್ನಿಗೆ ಪತಿ ತ್ರಿವಳಿ ತಲಾಖ್ ಹೇಳಿದ ಘಟನೆ ಬೆಂಗಳೂರಿನ ಸುದ್ಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ಮೊಹಮ್ಮದ್ ಅಕ್ರಂ ವಿರುದ್ಧ ಪತ್ನಿ ತಸ್ಮಿಯಾ ಹುಸೇನಿ ವರದಕ್ಷಿಣೆ ಕಿರುಕುಳ ಸೇರಿದಂತೆ ತ್ರಿವಳಿ ತಲಾಖ್ ನೀಡಿರುವ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು‌ ನೀಡಿರುತ್ತಾರೆ. ಮದುವೆಯ ಸಂದರ್ಭ ತವರು ಮನೆಯಿಂದ ಪತಿಗೆ ಒಟ್ಟು 30 ಲಕ್ಷ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಲಾಗಿದೆ. ಪತಿ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಕೊಡಲು ಸಾ‍ಧ್ಯವಾಗದ ಕಾರಣ ಹಿಂಸೆ ನೀಡಿರುತ್ತಾರೆ. ರಂಜಾನ್ ಹಬ್ಬಕ್ಕೆ ತವರಿಗೆ ಹೋದಾಗ 10 ಲಕ್ಷ ರೂ. ತರಲು ಹೇಳಿದ್ದು, ತರದಿದ್ದಲ್ಲಿ ಮನೆಗೆ ಸೇರಿಸೋದಿಲ್ಲ ಎಂದೂ ಎಚ್ಚರಿಸಿದ್ದರು. ಹಣ ನೀಡಲು ಸಾಧ್ಯವಾಗದ ಕಾರಣ ಪತಿ ಅಪಾರ್ಟ್‌ಮೆಂಟ್ ಒಂದಕ್ಕೆ ಕರೆಸಿ ಲಿಫ್ಟ್‌ ನಲ್ಲೇ ಮೂರು ಬಾರಿ ತಲಾಖ್ ಹೇಳಿ ಹೊರದಬ್ಬಿರುತ್ತಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!