Friday, August 19, 2022
spot_img
Homeರಾಜ್ಯಜಾತಿ ಧರ್ಮ ನೋಡಿ ಸರಕಾರದಿಂದ ಪರಿಹಾರ ಘೋಷಣೆ - ಕುಮಾರಸ್ವಾಮಿ

ಜಾತಿ ಧರ್ಮ ನೋಡಿ ಸರಕಾರದಿಂದ ಪರಿಹಾರ ಘೋಷಣೆ – ಕುಮಾರಸ್ವಾಮಿ

ಕಲಬುರಗಿ : ಬೆಳ್ಳಾರೆಯಲ್ಲಿ ಕೊಲೆಯಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಅದೇ ಜಿಲ್ಲೆಯಲ್ಲಿ ಕೊಲೆಯಾದ ಮುಸ್ಲಿಂ ಯುವಕನಿಗೆ ಪರಿಹಾರ ಏಕೆ ಘೋಷಣೆ ಮಾಡಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಜೆಡಿಎಸ್ ಸಮಾವೇಶಕ್ಕೆ ಶನಿವಾರ ಚಾಲನೆ ನೀಡಿದ ಅವರು, ಜಾತಿ, ಧರ್ಮ ನೋಡಿ ಪರಿಹಾರ ಕೊಡುತ್ತಿರುವುದು ಅನಾಗರಿಕ ಸರ್ಕಾರದ ಲಕ್ಷಣ ಎಂದು ಕೆಂಡಕಾರಿದರು.


ಕೆ.ಎಸ್. ಈಶ್ವರಪ್ಪ ಅವರು ಪ್ರವೀಣ್ ಹತ್ಯೆ ಖಂಡಿಸಿ ರಾಜೀನಾಮೆ ನೀಡಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಬಗ್ಗೆ ದುರಹಂಕಾರದ ಮಾತುಗಳನ್ನಾಡಿದ್ದಾರೆ. ನೀವಿಲ್ಲದಿದ್ದರೂ ಪಕ್ಷಕ್ಕೆ ತೊಂದರೆಯಾಗದು ಎಂಬರ್ಥದಲ್ಲಿ ಮಾತನಾಡಿದ್ದಾರೆ. ನಿಮ್ಮ ರಾಜೀನಾಮೆಯನ್ನು ಅಂಗೀಕರಿಸಿಕೊಳ್ಳುತ್ತೇವೆ. ಪಕ್ಷ ಸೇರುವವರು ತುದಿಗಾಲಲ್ಲಿ ಇದ್ದಾರೆ ಎಂದೂ ತಿಳಿಸಿರುತ್ತಾರೆ. ಹೀಗಾಗಿ, ಬಿಜೆಪಿಯಲ್ಲಿ ಕೆಲಸ ಮಾಡಲು ತಮ್ಮ ಮಕ್ಕಳನ್ನು ಬಿಟ್ಟಿರುವ ತಾಯಂದಿರು ಬಿಜೆಪಿಯ ಈ ಅವಕಾಶವಾದಿತನದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!