ಲಖನೌ: ದೇಶಾದ್ಯಂತ ಕೋಮು ಪ್ರಕ್ಷುಬ್ಧತೆ ನೆಲೆಸಿದ್ದರೂ ಆಗಾಗ ಮತೀಯ ಸಾಮರಸ್ಯವನ್ನು ಕದಡುವ ಪ್ರಯತ್ನಗಳು ನಡೆಯುತ್ತಿರುತ್ತವೆ. ಶುಕ್ರವಾರ ಕನ್ವರ್ ಯಾತ್ರಿಕರ ಮೇಲೆ ಮುಸ್ಲಿಂ ಸಮುದಾಯದವರು ಕಟ್ಟಡದ ಮೇಲಿಂದ ಕೊಳಚೆ ನೀರು ಎರಚಿ ಧಾರ್ಮಿಕ ಸಾಮರಸ್ಯಕ್ಕೆ ಭಂಗ ತರಲು ಯತ್ನಿಸಿದ್ದಾರೆ. ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ.
ಇಲ್ಲಿನ ಕಂಟೋನ್ಮೆಂಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲವರು ಕನ್ವರ್ ಯಾತ್ರಿಕರ ಡಿಜೆ ಶಬ್ದದಿಂದ ತೊಂದರೆಯಾಗುತ್ತದೆ ಎಂದು ಆಕ್ಷೇಪ ಎತ್ತಿ ಕಟ್ಟಡದ ಮೇಲಿಂದ ಕೊಳಕು ನೀರು ಎರಚಿದ್ದಾರೆ. ಇದನ್ನು ಪ್ರತಿಭಟಿಸಿ ಕನ್ವರ್ ಯಾತ್ರಿಕರು ಧರಣಿ ನಡೆಸಿದ ಬಳಿಕ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಕನ್ವರ್ ಯಾತ್ರಿಕರು ಪರ್ಗಾ ಎಂಬ ಗ್ರಾಮದ ಮೂಲಕ ಹಾದು ಹೋಗುತ್ತಿರುವಾಗ ಈ ಘಟನೆ ಸಂಭವಿಸಿದೆ.
