ಬಿ.ಎಸ್ಸಿ ಅಗ್ರಿಯಲ್ಲಿ 16ನೇ, ಬಿ.ಎನ್.ವೈ.ಎಸ್ನಲ್ಲಿ 28ನೇ ರ್ಯಾಂಕ್
ಕಾರ್ಕಳ : ಇಂಜಿನಿಯರ್ ಹಾಗೂ ಇತರ ವೃತ್ತಿಪರ ಕೋರ್ಸ್ಗಳಿಗೆ ನಡೆದ ಕೆಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಕಾಲೇಜಿನ ಕು. ಸ್ತುತಿ ಎಸ್.ಇಂಜಿನಿಯರಿಂಗ್ ವಿಭಾಗದಲ್ಲಿ 40ನೇ ರ್ಯಾಂಕ್ ಸಾಧನೆ ಮಾಡಿರುತ್ತಾರೆ. ಸಂಸ್ಥೆಯ 7 ವಿದ್ಯಾರ್ಥಿಗಳು ಇಂಜಿನಿಯರಿಂಗ್ ವಿಭಾಗದಲ್ಲಿ 500ರೊಳಗಿನ ರ್ಯಾಂಕ್ ಗಳಿಸಿರುತ್ತಾರೆ. ಬಿ.ಎಸ್ಸಿ ಅಗ್ರಿಯಲ್ಲಿ ಆರ್ಯ ಪಿ. ಶೆಟ್ಟಿ 16ನೇ ರ್ಯಾಂಕ್ ಹಾಗೂ ಬಿಎನ್ವೈಎಸ್ನಲ್ಲಿ ಅಖಿಲ್ ಯು. ವಾಗ್ಲೆ 28ನೇ ರ್ಯಾಂಕ್ ಪಡೆದಿರುತ್ತಾರೆ. ಈ ವರ್ಷ ರಾಜ್ಯದಲ್ಲಿ 2,10,829 ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುತ್ತಾರೆ. ಜ್ಞಾನಸುಧಾ ಕಾಲೇಜಿನ 489 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು 1 ಸಾವಿರದೊಳಗಿನ ರ್ಯಾಂಕ್ , 29 ವಿದ್ಯಾರ್ಥಿಗಳು 2 ಸಾವಿರದೊಳಗಿನ ರ್ಯಾಂಕ್, 88 ವಿದ್ಯಾರ್ಥಿಗಳು 5 ಸಾವಿರದೊಳಗಿನ ರ್ಯಾಂಕ್ ಗಳಿಸಿರುತ್ತಾರೆ. ಸಂಸ್ಥೆಯ ಕೆಸಿಇಟಿ ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಅಭಿನಂದಿಸಿದ್ದಾರೆ.