Homeಸ್ಥಳೀಯ ಸುದ್ದಿಜೂಜಾಟ : ಸಶಸ್ತ್ರ ಪಡೆಯ ನಾಲ್ವರು ಸಿಬ್ಬಂದಿ ಸೆರೆ

Related Posts

ಜೂಜಾಟ : ಸಶಸ್ತ್ರ ಪಡೆಯ ನಾಲ್ವರು ಸಿಬ್ಬಂದಿ ಸೆರೆ

ಹುಬ್ಬಳ್ಳಿ : ಜೂಜಾಟದಲ್ಲಿ ತೊಡಗಿದವರನ್ನು ಹಿಡಿಯಬೇಕಾಗಿದ್ದ ಪೊಲೀಸರೇ ಜೂಜಾಟ ಕೇಸ್‌ನಲ್ಲಿ ಬಂಧನವಾಗಿರುವ ಘಟನೆ ನಡೆದಿದೆ. ಇಸ್ಪೀಟ್ ಆಟದಲ್ಲಿ ತೊಡಗಿದ್ದ ನಗರದ ಸಶಸ್ತ್ರ ಪಡೆಯ ನಾಲ್ವರು ಸಿಬ್ಬಂದಿಯನ್ನು ಗೋಕುಲರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.ಇಲ್ಲಿನ ಅಕ್ಷಯ ಕಾಲೋನಿಯ ಮನೆಯೊಂದರಲ್ಲಿ ಇಸ್ಪೀಟ್‌ ಜೂಜಿನಲ್ಲಿ ತೊಡಗಿದ್ದ ವೇಳೆ ಗೋಕುಲರಸ್ತೆ ಪೊಲೀಸರು ದಾಳಿ ಮಾಡಿದ್ದಾರೆ. ನಗರ ಸಶಸ್ತ್ರ ಮೀಸಲು ಪಡೆಯ ಓರ್ವ (ಸಿಎಆರ್) ಇನ್‌ಸ್ಪೆಕ್ಟರ್, ಇಬ್ಬರು ಹೆಡ್ ಕಾನ್ಸ್‌ಟೆಬಲ್‌ಗಳು, ಓರ್ವ ಕಾನ್‌ಸ್ಟೆಬಲ್, ಒಬ್ಬ ನಿವೃತ್ತ ಹೆಡ್ ಕಾನ್‌ಸ್ಟೆಬಲ್ ಜೂಜಾಟದಲ್ಲಿ ತೊಡಗಿದ್ದು ಪತ್ತೆಯಾಗಿದೆ. ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ ಅವರ ಸೂಚನೆಯಂತೆ, ಗೋಕುಲ ರೋಡ್ ಠಾಣೆ ಇನ್‌ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ನೇತೃತ್ವದ ತಂಡ ದಾಳಿ ಮಾಡಿದೆ.
ಜೂಜಾಟದಲ್ಲಿ ತೊಡಗಿದ್ದ ಸಿಎಆರ್‌ನ ಇಬ್ಬರು ಹೆಡ್ ಕಾನ್‌ಸ್ಟೆಬಲ್, ಒಬ್ಬ ನಿವೃತ್ತ ಹೆಡ್ ಕಾನ್‌ಸ್ಟೆಬಲ್ ಹಾಗೂ ಸಂಚಾರ ವಿಭಾಗದ ಒಬ್ಬ ಕಾನ್‌ಸ್ಟೆಬಲ್ ನನ್ನು ಪೊಲೀಸರು ಬಂಧಿಸಿದ್ದು, ಸಿಎಆರ್ ಇನ್ಸ್‌ಪೆಕ್ಟರ್ ಪರಾರಿಯಾಗಿದ್ದಾರೆ.
ಜೂಜಿಗೆ ಇರಿಸಿದ್ದ 9 ಸಾವಿರ ರೂ. ನಗದು ಹಾಗೂ 5 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!