ಬೆಂಗಳೂರು: ಬೇಲಿಯೇ ಹೊಲ ಮೇಯ್ದ ಘಟನೆಯೊಂದು ಬೆಂಗಳೂರಿನಲ್ಲಿ ಸಂಭವಿಸಿದೆ. ಪ್ರಿಯಕರನನ್ನು ಸೇರಲು ಮನೆ ಬಿಟ್ಟು ಬಂದಿದ್ದ ಅಪ್ರಾಪ್ತ ವಯಸ್ಸಿನ ಯುವತಿಯನ್ನು ಪೊಲೀಸ್ ಪೇದೆಯೊಬ್ಬ ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದು, ಘಟನೆ ಬೆಳಕಿಗೆ ಬಂದ ಬಳಿಕ ಆತನನ್ನು ಬಂಧಿಸಲಾಗಿದೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪವನ್ ದ್ಯಾವಣ್ಣವರ್ ಬಂಧಿತ ಆರೋಪಿ.
ಕೆ.ಪಿ. ಅಗ್ರಹಾರ ಠಾಣೆ ವ್ಯಾಪ್ತಿಯ ನಿವಾಸಿಯಾಗಿರುವ ಯುವತಿ ಚಾಮರಾಜನಗರದಲ್ಲಿರುವ ತನ್ನ ಪ್ರೇಮಿಯನ್ನು ಭೇಟಿಯಾಗುವ ಸಲುವಾಗಿ ಜು.26ರಂದು ಮನೆಯಲ್ಲಿ ಹೇಳದೆ ಬಂದಿದ್ದಳು. ಉದ್ಯಾನ ಬಳಿಯ ರಸ್ತೆಯಲ್ಲಿ ಒತ್ತಡದಲ್ಲಿರುವಂತೆ ವರ್ತಿಸುತ್ತಿದ್ದ ಯುವತಿಯನ್ನು ಗಮನಿಸಿದ್ದ ಪವನ್ ಆಕೆಯನ್ನು ಮಾತಾಡಿಸಿ ವಿಷಯ ತಿಳಿದುಕೊಂಡಿದ್ದ. ಚಾಮರಾಜನಗರಕ್ಕೆ ಬಿಡುತ್ತೇನೆಂದು ನಂಬಿಸಿ ಆಕೆಯನ್ನು ತನ್ನ ಬೈಕ್ಗೆ ಹತ್ತಿಸಿಕೊಂಡಿದ್ದ. ದಾರಿ ಮಧ್ಯೆ ಈಗ ಸಂಜೆಯಾಗಿರುವುದರಿಂದ ಚಾಮರಾಜನಗರ ತಲುಪುವಾಗ ಕತ್ತಲಾಗುತ್ತದೆ. ಈ ಹೊತ್ತಿನಲ್ಲಿ ಪ್ರೇಮಿಯನ್ನು ಹುಡುಕಲು ಸಾಧ್ಯವಿಲ್ಲ. ಇಂದು ರಾತ್ರಿ ನನ್ನ ರೂಮಿನಲ್ಲಿ ತಂಗು ನಾಳೆ ಬೆಳಗ್ಗೆ ಹುಡುಕೋಣ ಎಂದಿದ್ದ. ಅವನ ಮಾತು ನಂಬಿ ಹೋದ ಯುವತಿ ಮೇಲೆ ರಾತ್ರಿ ಅತ್ಯಾಚಾರ ಎಸಗಿದ್ದಾನೆ.
ಮರುದಿನ ಬೆಳಗ್ಗೆ ಯುವತಿಯನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಪವನ್ ಕರ್ತವ್ಯಕ್ಕೆ ಹೋಗಿದ್ದ. ಯುವತಿ ಪ್ರೇಮಿಯ ಮನೆ ಹುಡುಕಿಕೊಂಡು ಹೋದಾಗ ಆತನ ತಂದೆ ಅಪ್ರಾಪ್ತ ವಯಸ್ಸಿನ ಯುವತಿಯನ್ನು ಮನೆಗೆ ಸೇರಿಸಲು ಹೆದರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಈ ನಡುವೆ ಯುವತಿಯ ಪೊಷಕರು ಅಪಹರಣ ಪ್ರಕರಣ ದಾಖಲಿಸಿದ್ದರು. ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಯುವತಿ ಪೊಲೀಸ್ ಪೇದೆ ತನ್ನ ಮೇಲೆ ಅತ್ಯಾಚಾರ ಎಸಗಿರುವ ವಿಚಾರ ತಿಳಿಸಿದ್ದಾಳೆ.
ಅತ್ಯಾಚಾರ ಎಸಗಿದ ಪೊಲೀಸ್ ಪೇದೆ ಬಂಧನ
Recent Comments
ಕಗ್ಗದ ಸಂದೇಶ
on