Wednesday, August 17, 2022
spot_img
Homeಜಿಲ್ಲಾಉಡುಪಿ : ಎಲ್ಲ ಸಂಘಟನೆಯ ಪ್ರಮುಖರಿಗೆ ಎಚ್ಚರದಿಂದಿರಲು ಸಂದೇಶ - ಎನ್.‌ ವಿಷ್ಣುವರ್ಧನ್‌

ಉಡುಪಿ : ಎಲ್ಲ ಸಂಘಟನೆಯ ಪ್ರಮುಖರಿಗೆ ಎಚ್ಚರದಿಂದಿರಲು ಸಂದೇಶ – ಎನ್.‌ ವಿಷ್ಣುವರ್ಧನ್‌

ಉಡುಪಿ : ಪ್ರವೀಣ್‌ ನೆಟ್ಟಾರು ಹತ್ಯೆಯ ನಂತರ ಗುರುವಾರ ಸಂಜೆ ಸುರತ್ಕಲ್‌ನಲ್ಲಿ ಫಾಜಿಲ್‌ ಎಂಬ ಯುವಕನ ಕೊಲೆ ನಡೆದಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಸಂಘಟನೆಗಳ ಪ್ರಮುಖರಿಗೆ ಎಚ್ಚರದಿಂದಿರಲು ಪೊಲೀಸ್‌ ಇಲಾಖೆಯಿಂದ ಸಂದೇಶ ರವಾನೆ ಮಾಡಲಾಗಿದೆ. ಪ್ರವೀಣ್‌ ಹತ್ಯೆಯಿಂದ ಇಡೀ ಕರಾವಳಿ ಜನತೆ ಬೆಚ್ಚಿಬಿದ್ದಿದ್ದು, ಈಗ ಮತ್ತೊಂದು ಕೊಲೆ ನಡೆದಿರುವುದರಿಂದ ಪೊಲೀಸ್‌ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ ಮತ್ತು ಸಂಘ ಪರಿವಾರ ಸಹಿತವಾಗಿ ವಿವಿಧ ಸಂಘಟನೆಯ ಪ್ರಮುಖರು ಎಚ್ಚರದಿಂದರುವಂತೆ ಮತ್ತು ರಾತ್ರಿ ವೇಳೆಯಲ್ಲಿ ಒಬ್ಬೊಬ್ಬರಾಗಿ ಸುತ್ತಾಡದಂತೆ ಸಲಹೆ ನೀಡಲಾಗಿದೆ. ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗ ಸೇರಿದಂತೆ ಸೂಕ್ಷ್ಮ ಪ್ರದೇಶ, ಚೆಕ್‌ ಪೋಸ್ಟ್‌ಗಳಲ್ಲಿ ಬೀಟ್‌ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಅನುಮಾನಾಸ್ಪದ ನಡೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಯಾವುದೆ ಮಾಹಿತಿ ಇದ್ದರೂ ಪೊಲೀಸ್‌ ಇಲಾಖೆಗೆ ನೀಡಬಹುದು ಎಂದು ಉಡುಪಿ ಎಸ್ಪಿ ಎನ್.‌ ವಿಷ್ಣುವರ್ಧನ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!