Friday, August 19, 2022
spot_img
Homeರಾಜ್ಯಈ ಸರ್ಕಾರದಿಂದ ನ್ಯಾಯ ಸಿಗುವ ನಂಬಿಕೆ ಹೊರಟುಹೋಗಿದೆ : ಪ್ರವೀಣ್ ಮನೆಗೆ ಹೋದ ಸಿಎಂ ಮಸೂದ್...

ಈ ಸರ್ಕಾರದಿಂದ ನ್ಯಾಯ ಸಿಗುವ ನಂಬಿಕೆ ಹೊರಟುಹೋಗಿದೆ : ಪ್ರವೀಣ್ ಮನೆಗೆ ಹೋದ ಸಿಎಂ ಮಸೂದ್ ಮನೆಗೆ ಭೇಟಿ ಕೊಡಲಿಲ್ಲವೇಕೆ? – ಯು. ಟಿ. ಖಾದರ್

ಮಂಗಳೂರು : ಕಳೆದ 10 ದಿನಗಳಲ್ಲಿ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮೂರನೇ ಕಗ್ಗೊಲೆ ನಡೆದಿದೆ. ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಹಿಂದೂ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಬೆಳ್ಳಾರೆಗೆ ಬಂದು ಹೋಗುವುದರೊಳಗೆ ಮಂಗಳೂರು ಹೊರವಲಯ ಸುರತ್ಕಲ್ ನಲ್ಲಿ ಮತ್ತೊಂದು ಭೀಕರ ಕೊಲೆ, ರಕ್ತದೋಕುಳಿ ಹರಿದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರಾವಳಿಯ ಕಾಂಗ್ರೆಸ್ ನಾಯಕ ಶಾಸಕ ಯು. ಟಿ. ಖಾದರ್, ಕಳೆದ 10 ದಿನಗಳಲ್ಲಿ ಆದ ಮೂರೂ ಕೊಲೆಯನ್ನು ನಾವು ಖಂಡಿಸುತ್ತೇವೆ. ಇದಕ್ಕೆ ನೈಜ ಕಾರಣವನ್ನು ಮತ್ತು ಕಾರಣರಾದವರನ್ನು ಸರ್ಕಾರ ಪತ್ತೆಹಚ್ಚಿ ಜನರ ಮುಂದೆ ನಿಲ್ಲಿಸಿ ಕಠಿಣ ಕ್ರಮ ತೆಗೆದುಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಬಹುದು ಎಂದು ಹೇಳಿದ್ದಾರೆ. ನೈಜವಾದ ಆರೋಪಿಗಳನ್ನು ಬಂಧಿಸದೆ ಒತ್ತಡಕ್ಕೆ ಪೊಲೀಸರು ಅಮಾಯಕರನ್ನು ಕರೆದುಕೊಂಡು ಬಂದರೆ ಸರ್ಕಾರದ, ಪೊಲೀಸ್ ಇಲಾಖೆಯ ವೈಫಲ್ಯವಾಗುತ್ತದೆ. ರಾಜ್ಯಸರ್ಕಾರ ಪಕ್ಷಾತೀತ, ನ್ಯಾಯತೀತವಾಗಿ ನಡೆದುಕೊಂಡು ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಮಾಡುವ ಕೆಲಸವಾಗಬೇಕಿದೆ ಎಂದರು. ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆಗಳನ್ನು ಯಾವ ನಾಯಕರೂ ನೀಡಬಾರದು ಎಂದರು.
ಮಂಗಳೂರಿನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಬಂದಾಗಲೇ ಕೊಲೆಯಾಗಿದೆ. ಸರ್ಕಾರದ ಮೇಲೆ ನಮಗೆ ನ್ಯಾಯ ಸಿಗುವ ನಂಬಿಕೆ ಇಲ್ಲದಾಗಿದೆ, ಇಲ್ಲಿ ಏನಾಗುತ್ತಿದೆ, ಶಾಂತಿ ಕದಡುವ ಕೆಲಸ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮೊನ್ನೆ ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿ ಸಾಂತ್ವನ ಹೇಳಿದ್ದು ಸ್ವಾಗತಾರ್ಹ. ಅದೇ ರೀತಿ ಸುಳ್ಯದಲ್ಲಿ ಕೆಲ ದಿನಗಳ ಹಿಂದೆ ಹತ್ಯೆಯಾದ ಮಸೂದ್ ಕುಟುಂಬದವರನ್ನೂ ಭೇಟಿ ಮಾಡಿ ನೋವಿನಲ್ಲಿರುವ ಆ ಕುಟುಂಬಕ್ಕೂ ಧೈರ್ಯ ಹೇಳುವ ಕೆಲಸ ಮಾಡಬೇಕಾಗಿತ್ತು, ಸಿಎಂ ಮತ್ತು ಗೃಹ ಸಚಿವರು ಎಲ್ಲರಿಗೂ ನ್ಯಾಯ ಒದಗಿಸುವಲ್ಲಿ ತಾರತಮ್ಯ ಮಾಡದೆ ನಡೆದುಕೊಳ್ಳಬೇಕು ಅಲ್ಲವೇ? ಎಂದು ಯು. ಟಿ. ಖಾದರ್ ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!