ಶಾಲಾ ಸೇರ್ಪಡೆ ವಯೋಮಿತಿ ಏರಿಕೆ: ಪಾಲಕರಲ್ಲಿ ಹಲವು ಗೊಂದಲ


ಬೆಂಗಳೂರು: ಒಂದನೇ ತರಗತಿಗೆ ಮಗುವನ್ನು ಸೇರಿಸಲು ಜೂ.1ಕ್ಕೆ 6 ವರ್ಷ ಪೂರ್ತಿಯಾಗಿರಬೇಕೆಂಬ ಶಿಕ್ಷಣ ಇಲಾಖೆಯ ಆದೇಶ ಅನೇಕ ಪಾಲಕರನ್ನು ಆತಂಕಕ್ಕೆ ತಳ್ಳಿದೆ. ಈ ಆದೇಶದ ಕುರಿತು ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ.
ಜೂನ್ ವೇಳೆಗೆ ಮಗುವಿಗೆ ಆರು ವರ್ಷ ಆಗದಿದ್ರೆ, ಮತ್ತೊಮ್ಮೆ ಯುಕೆಜಿ ತರಗತಿಯಲ್ಲಿ ಕುಳಿತುಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಮಗು ಒಂದು ವರ್ಷ ಯುಕೆಜಿ ತರಗತಿ ಪುನರಾವರ್ತಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸುತ್ತೋಲೆಯ ತಾತ್ಪರ್ಯ. ಸದ್ಯ ಒಂದನೇ ತರಗತಿಗೆ ದಾಖಲಾಗಲು ಮಗುವಿಗೆ ಕನಿಷ್ಠ 5 ವರ್ಷ 5 ತಿಂಗಳು ಆದರೆ ಸಾಕು. ಆದ್ರೆ 2023ರ ಶೈಕ್ಷಣಿಕ ವರ್ಷದಿಂದ ಮಗುವಿಗೆ ಕನಿಷ್ಠ 6 ವರ್ಷ ಆಗಿರಬೇಕು ಎಂದು ಸ್ಪಷ್ಟವಾಗಿ ಸುತ್ತೋಲೆಯಲ್ಲಿ ಹೇಳಲಾಗಿದೆ
ಈ ಆದೇಶದಿಂದ ಶಾಲೆಗಳು, ಪಾಲಕರು ಮತ್ತು ಶಿಕ್ಷಕರು ಗೊಂದಲಕ್ಕೆ ಒಳಗಾಗಿದ್ದಾರೆ. ಇದೇ ವೇಳೆ ಪ್ರಿ ಸ್ಕೂಲ್‌ಗಳ ಆಡಳಿತ ಮಂಡಳಿ ಮತ್ತು ಶಿಕ್ಷಣ ತಜ್ಞರು ಸರ್ಕಾರದ ಹೊಸ ಆದೇಶವನ್ನು ಸ್ವಾಗತಿಸಿದ್ದಾರೆ.

ಪಾಲಕರ ಗೊಂದಲ

ಪಾಲಕರು ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಶಾಲೆಗೆ ಸೇರಿಸಲು ಬಯಸುತ್ತಾರೆ. ಚಿಕ್ಕ ಪ್ರಾಯದಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಿದರೆ ಕಲಿಕೆ ಅವರಿಗೆ ಕಠಿಣವಾಗುತ್ತದೆ. ಎಳೆ ಮನಸುಗಳ ಮೇಲೆ ಕಲಿಕೆಯ ಭಾರ ಬೀಳಬಾರದು ಎಂಬ ಕಾರಣಕ್ಕೆ ಪ್ರವೇಶಾತಿ ವಯೋಮಿತಿಯನ್ನು ಹೆಚ್ಚಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.
ಆದರೆ ಇದರಿಂದ ಪ್ರವೇಶಾತಿ ಶುರುವಾಗುವ ಜೂನ್‌ ತಿಂಗಳಿಗಾಗುವಾಗ 5 ವರ್ಷ 10 ತಿಂಗಳು ಅಥವಾ 5 ವರ್ಷ 11 ತಿಂಗಳು ತುಂಬಿರುವ ಮಕ್ಕಳ ಪಾಲಿಗೆ ಒಂದು ವರ್ಷ ವ್ಯರ್ಥವಾಗಿ ಹೋಗುತ್ತದೆ. ಒಂದು ತಿಂಗಳು ಕಡಿಮೆಯಾದ ಪರಿಣಾಮವಾಗಿ ಈ ಮಗು ಪೂರ್ತಿ ಒಂದು ವರ್ಷವನ್ನು ಯುಕೆಜಿಯಲ್ಲಿ ಕಳೆಯಬೇಕಾಗುತ್ತದೆ. ಮುಂದಿನ ಇಡೀ ಶಿಕ್ಷಣದ ಮೇಲೆ, ಕೊನೆಗೆ ಉದ್ಯೋಗದ ಮೇಲೂ ಇದರ ಪರಿಣಾಮವಾಗುತ್ತದೆ. ಹೀಗೆ ವ್ಯರ್ಥವಾಗುವ ಆಯುಷ್ಯದ ಒಂದು ವರ್ಷಕ್ಕೆ ಯಾರು ಹೊಣೆ ಎನ್ನುವುದು ಪಾಲಕರು ಕೇಳುತ್ತಿರುವ ಪ್ರಶ್ನೆ.
1ನೇ ತರಗತಿಗೆ ಸೇರಿಸಲು ಮಕ್ಕಳಿಗೆ 6ನೇ ವರ್ಷ ಸೂಕ್ತ ವಯಸ್ಸು ಎಂದು ಕರ್ನಾಟಕ ಕೌನ್ಸಿಲ್ ಫಾರ್ ಪ್ರಿಸ್ಕೂಲ್ ಅಸೋಸಿಯೇಶನ್ ​​ಹೇಳಿದೆ. ಪಾಲಕರು ಆತಂಕಕ್ಕೆ ಒಳಗಾಗುವುದು ಬೇಡ. ಇದು ಮಕ್ಕಳ ಉತ್ತಮ ಫಲಿತಾಂಶಕ್ಕೆ ಕಾರಣವಾಗಲಿದೆ. ಮಕ್ಕಳು ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಈಗ ಹಿಂದಿನಂತೆ ನಿವೃತ್ತಿ ಬಗ್ಗೆ ಯೋಚಿಸಬೇಕಿಲ್ಲ ಎಂದು ಹೇಳುತ್ತಾರೆ ಪರಿಷತ್ತಿನ ಕಾರ್ಯದರ್ಶಿ ಪೃಥ್ವಿ ಬನವಾಸಿ.





























































































































































































































error: Content is protected !!
Scroll to Top