ನಾಗಪುರ : ಚಿತೆಗೆ ಬೆಂಕಿ ಹಚ್ಚುವಾಗ ಚಿತೆ ಉರಿಸಲು ತಂದಿದ್ದ ಡೀಸೆಲ್ ಕ್ಯಾನಿಗೆ ಬೆಂಕಿ ಹತ್ತಿಕೊಂಡು ಇಬ್ಬರು ಸಜೀವ ದಹನಗೊಂಡ ಘಟನೆ ಮಹಾರಾಷ್ಟ್ರದ ನಾಗಪುರ ನಗರದಲ್ಲಿ ನಡೆದಿದೆ.
ನಗರದ ಕಾಮಠಿ ಮೋಕ್ಷಧಾಮ ಘಾಟ್ನಲ್ಲಿ ಗುರುವಾರ ರಾತ್ರಿ ಅಂತ್ಯಕ್ರಿಯೆ ನೆರವೇರಿಸುತ್ತಿವಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೀಸೆಲ್ ಕ್ಯಾನಿಗೆ ಬೆಂಕಿ ಹತ್ತಿಕೊಂಡು ಸ್ಫೋಟಿಸಿದ ಪರಿಣಾಮವಾಗಿ ಅದರ ಬಳಿಯಿದ್ದ ಇಬ್ಬರು ಜೀವಂತ ದಹಿಸಿ ಇನ್ನೊಬ್ಬರು ಗಾಯಗೊಂಡಿದ್ದಾರೆ. ಚಿತೆಗೆ ಡೀಸೆಲ್ ಸುರಿಯುತ್ತಿದ್ದಾಗ ಕ್ಯಾನಿಗೆ ಬೆಂಕಿ ಹತ್ತಿಕೊಂಡಿದೆ.
ಚಿತೆ ಉರಿಸಲು ತಂದ ಡೀಸೆಲ್ಗೆ ಹತ್ತಿಕೊಂಡ ಬೆಂಕಿ: ಇಬ್ಬರು ಸಾವು
Recent Comments
ಕಗ್ಗದ ಸಂದೇಶ
on