Friday, August 19, 2022
spot_img
Homeಸುದ್ದಿಕಾರ್ಕಳದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

ಕಾರ್ಕಳದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

ಕಾರ್ಕಳ : ಕುಂದಾಪುರ ಭಾಷೆಗೊಂದು ವಿಶಿಷ್ಟ ಸೊಗಡಿದೆ. ಕುಂದಾಪುರದ ಜನತೆ ತಮ್ಮ ಭಾಷೆ ಮೇಲೆ ವಿಶೇಷ ಪ್ರೀತಿ ಹೊಂದಿದ್ದಾರೆ. ಅವರ ಬದುಕಿನೊಂದಿಗೆ ಬೆಸೆದಿರುವ ಭಾಷೆಯಿದು ಎಂದು ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್‌ ಅಭಿಪ್ರಾಯಪಟ್ಟರು.
ಅವರು ಗುರುವಾರ ಅನಂತಶಯನದ ಪ್ರಕಾಶ್ ಹೋಟೆಲ್‌ನ ಸಂಭ್ರಮ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಪ್ರಾಂಶುಪಾಲ ಸಿದ್ದಾಪುರ ವಾಸುದೇವ ಭಟ್ ಮಾತನಾಡಿ, ಕುಂದಾಪುರ ಕನ್ನಡ ಭಾಷೆ ತನ್ನದೇ ಆದ ವೈಶಿಷ್ಟ್ಯ ಒಳಗೊಂಡಿದ್ದು. ಹಳೆಗನ್ನಡ ಭಾಷೆಯ ಕಾವ್ಯ ಗುಣವಿದೆ. ಸಾಹಿತ್ಯದ ಎಲ್ಲ ಪ್ರಕಾರಗಳೂ ಈ ಭಾಷೆಯಲ್ಲಿವೆ ಎಂದರು.

ಜಗತ್ತಿನಾದ್ಯಂತ ಆಚರಣೆ
ಕುಂದಾಪುರದ ಕಿರಿಯ ವಕೀಲ ಶಾನ್ಕಟ್ ಉಮೇಶ್ ಶೆಟ್ಟಿ ಮಾತನಾಡಿ, ಕುಂದಾಪುರ ಭಾಷೆ ಬೆಳೆದು ಬರಲು ಕುಂದಾಪುರ ಪ್ರದೇಶದ ಜನರು ನಡೆಸಿಕೊಂಡು ಬಂದ ಹಬ್ಬ ಹರಿದಿನ, ಆರಾಧನೆ, ನಂಬಿಕೆಗಳೇ ಪ್ರಬಲ ಕಾರಣ. ಆದರೆ, ಇಂದು ಯಾಂತ್ರಿಕತೆ, ಔದ್ಯೋಗಿಕತೆಯ ಕಾರಣ ಅವು ಮೂಲೆಗುಂಪಾಗುತ್ತಿದ್ದರೂ ಭಾಷೆಯ ಸೊಗಡನ್ನು ಉಳಿಸಿಕೊಳ್ಳಬೇಕು ಎಂಬ ಹಂಬಲದಿಂದ ವಿಶ್ವ ಕುಂದಾಪುರ ಕನ್ನಡ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ ಎಂದರು.
ಸಂಚಾಲಕ ಎಸ್. ನಿತ್ಯಾನಂದ್ ಪೈ ಮಾತನಾಡಿ, ಕುಂದಾಪುರ ಭಾಷೆಗೆ ಎಲ್ಲರನ್ನೂ ಸೆಳೆಯುವ ಶಕ್ತಿಯದೆ. ಹೀಗಾಗಿ ಇಂತಹ ಕಾರ್ಯಕ್ರಮ ಆಯೋಜಿಸಲು ಪ್ರೇರಣೆ ದೊರಕಿತು ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಎಂಸಿಎಫ್‌ ಡಿಜಿಎಂ, ನ್ಯೂಸ್‌ ಕಾರ್ಕಳ ಸಲಹಾ ಸಮಿತಿ ಸದಸ್ಯ ಕೆ.ಬಿ. ಕೀರ್ತನ್ ಕುಮಾರ್ ಮಾತನಾಡಿದರು. ಗಣೇಶ್ ಗಂಗೊಳ್ಳಿ ಕುಂದಾಪುರ ಭಾಷೆಯ ಹಾಡುಗಳನ್ನು ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಸ್ವಾಗತಿಸಿದರು. ಶಿಕ್ಷಕ ರಾಜಾರಾಮ್ ಶೆಟ್ಟಿ ನಿರೂಪಿಸಿ, ಪ್ರಕಾಶ ನಾಯ್ಕ್ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!