Friday, August 19, 2022
spot_img
Homeಸುದ್ದಿಪ್ರವೀಣ್‌ ಹಂತಕರಿಗೆ ಕಠಿಣ ಶಿಕ್ಷೆಯಾಗಲಿ- ಡಿ.ಆರ್. ರಾಜು ಆಗ್ರಹ

ಪ್ರವೀಣ್‌ ಹಂತಕರಿಗೆ ಕಠಿಣ ಶಿಕ್ಷೆಯಾಗಲಿ- ಡಿ.ಆರ್. ರಾಜು ಆಗ್ರಹ

ಕಾರ್ಕಳ : ಬಿಜೆಪಿ ಯುವ ನೇತಾರ, ಬಿಲ್ಲವ ಸಮುದಾಯದ ಉತ್ಸಾಹಿ ತರುಣ ನೆಟ್ಟಾರು ಪ್ರವೀಣ್ ಅವರನ್ನು ಕೊಲೆ ಮಾಡಿರುವ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಕಠಿಣವಾಗಿ ಶಿಕ್ಷಿಸಬೇಕೆಂದು ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ. ಆರ್. ರಾಜು ಆಗ್ರಹಿಸಿದರು. ನೆಟ್ಟಾರು ಪ್ರವೀಣ್ ಪೂಜಾರಿ ಅವರು ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಗೆಜ್ಜೆಗಿರಿ ಕ್ಷೇತ್ರದ ಜೀರ್ಣೋದ್ಧಾರ ಸಂದರ್ಭ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದರು. ಈ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇಂತಹ ಹುಡುಗ ಈಗ ನಮ್ಮೊಂದಿಗಿಲ್ಲ. ಸಂಘಟನೆಯ ಹೆಸರಿನಲ್ಲಿ ಅಮಾಯಕ ಯುವಕರನ್ನು ಬಲಿಪಡೆಯಬಾರದು. ಧರ್ಮದ ಕಿಚ್ಚು ಹಚ್ಚಿ ರಾಜಕೀಯ ಮಾಡಬಾರದು. ರಾಜಕಾರಣಿಗಳು ಯುವಕರನ್ನು ದಾರಿತಪ್ಪಿಸುವ ಕಾರ್ಯಮಾಡದೇ ಸ್ವಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಸರಕಾರ ಯುವಕರಿಗೆ ಉನ್ನತ ಶಿಕ್ಷಣ, ಉದ್ಯೋಗ ನೀಡುವ ಕಾರ್ಯ ಮಾಡಬೇಕೆಂದು ಡಿ.ಆರ್.‌ ರಾಜು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!