ಪಡುಬಿದ್ರೆ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಯುವಕನ ಬಂಧನ

ಪಡುಬಿದ್ರೆ : ಅಪಾರ್ಟ್‌ಮೆಂಟ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ನೀಡಿದ್ದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಹೆಜಮಾಡಿ ಆಲಡೆ ಬಳಿಯ ನಿವಾಸಿ ಅಬ್ದುಲ್ ರೆಹಮಾನ್ ಅವರ ಮಗ ಯಾಸಿನ್ (19ವ.) ಬಂಧಿತ ಆರೋಪಿ, ಹಾಗೂ ಆರೋಪಿಗೆ ಸಹಕಾರ ನೀಡಿದ್ದ ಅಪ್ರಾಪ್ತ ವಯಸ್ಕ ಬಾಲಕನನ್ನೂ ವಶಪಡಿಸಿಕೊಂಡು ಆತನನ್ನು ಬಾಲಾಪರಾಧಿಗೃಹಕ್ಕೆ ಪೊಲೀಸರು ಸೇರಿಸಿದ್ದಾರೆ. ಆರೋಪಿಯನ್ನು ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿ ವಿರುದ್ಧ ಬಾಲಕಿಯ ತಂದೆ ನೀಡಿದ ದೂರಿನನ್ವಯ ಪೋಕ್ಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.









































































































































































error: Content is protected !!
Scroll to Top