Homeಸ್ಥಳೀಯ ಸುದ್ದಿಪ್ರವೀಣ್ ನೆಟ್ಟಾರು ಹತ್ಯೆ: ಕಾರ್ಕಳ ಯುವ ಕಾಂಗ್ರೆಸ್ ಖಂಡನೆ

Related Posts

ಪ್ರವೀಣ್ ನೆಟ್ಟಾರು ಹತ್ಯೆ: ಕಾರ್ಕಳ ಯುವ ಕಾಂಗ್ರೆಸ್ ಖಂಡನೆ

ಕಾರ್ಕಳ: ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರು, ಸಂಘಟನಾ ಕಾರ್ಯದರ್ಶಿ, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಕಾರ್ಕಳ ಯುವ ಕಾಂಗ್ರೆಸ್‌ ಖಂಡಿಸಿದೆ.
ಪ್ರವೀಣ್‌ ಅಗಲುವಿಕೆ ತುಂಬಾ ವಿಷಾದನೀಯ. ಕೊಲ್ಲುವ ರಾಕ್ಷಸಿ ಕೃತ್ಯಕ್ಕೆ ನನ್ನ ಧಿಕ್ಕಾರವಿದೆ. ಕೊಲೆ ಸಮರ್ಥನಿಯವೂ ಅಲ್ಲ, ಅನುಕರಣೀಯವೂ ಅಲ್ಲ. ಕೊಲೆಗಡುಕರನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಆಚಾರ್ಯ ಇನ್ನಾ ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರು ನಿನ್ನೆ ತರಾತುರಿಯಿಂದ ಕಾರು ಹತ್ತಿ ಪಲಾಯನಗೈದಂತೆ ಹೋಗುವುದು ಸರಿಯಲ್ಲ. ಜಿಲ್ಲಾ‌ ಉಸ್ತುವಾರಿಯಾಗಿ ಆಕ್ರೋಶಿತ ಕಾರ್ಯಕರ್ತರನ್ನು‌ ಸಮಾಧಾನಪಡಿಸಿ ವಾತಾವರಣ ತಿಳಿಗೊಳಿಸುವ ಜವಾಬ್ದಾರಿಯುತ ನಡೆಯನ್ನು ಸುನೀಲ್ ತೋರಿಸಬೇಕಿತ್ತು.
ಹಿಂದುತ್ವ ಮತ್ತು‌ ಅಧಿಕಾರ ಇವೆರಡರ ಮಧ್ಯೆ ನನಗೆ ಆಯ್ಕೆ ನೀಡಿದರೆ ಹಿಂದುತ್ವವೇ ಮುಖ್ಯ ಎಂದು ಹೇಳಿರುವುದು ಕೇವಲ ಬಡಾಯಿ ಎಂದು ಸಾಬೀತಾಗಿದೆ ಎಂದು ಯೋಗೀಶ್‌ ಆಚಾರ್ಯ ಟೀಕಿಸಿದ್ದಾರೆ.

LEAVE A REPLY

Please enter your comment!
Please enter your name here

Latest Posts

error: Content is protected !!