29 ಕೋ.ರೂ. ನಗದು, 5 ಕೆಜಿ ಚಿನ್ನ ವಶ
ಕೋಲ್ಕತ್ತ: ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ನಟಿ ಅರ್ಪಿತಾ ಮುಖರ್ಜಿಯ ಇನ್ನೊಂದು ಮನೆಯಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತೆ ಸುಮಾರು 29 ಕೋ.ರೂ. ನಗದು ಮತ್ತು ಕೆಜಿಗಟ್ಟಲೆ ಬಂಗಾರ ವಶಪಡಿಸಿಕೊಂಡಿದ್ದಾರೆ. ಜು.23ರಂದು ಅರ್ಪಿತಾ ಅವರ ಒಂದು ಮನೆಯಲ್ಲಿ 21 ಕೋ.ರೂ. ಸಿಕ್ಕಿತ್ತು. ಇದು ಪಾರ್ಥ ಚಟರ್ಜಿ ಶಿಕ್ಷಣ ಸಚಿವರಾಗಿದ್ದ ವೇಳೆ ಶಿಕ್ಷಕರ ನೇಮಕಾತಿಗಾಗಿ ಪಡೆದ ಲಂಚದ ಹಣ ಎಂದು ಅರ್ಪಿತಾ ಇ.ಡಿ. ಅಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾರೆ.
ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಇಬ್ಬರೂ ಪ್ರಸ್ತುತ ಇ.ಡಿ. ವಶದಲ್ಲಿದ್ದು ತೀವ್ರ ವಿಚಾರಣೆ ನಡೆಯುತ್ತಿದೆ. ಇಬ್ಬರನ್ನು ಪ್ರಶ್ನಿಸಿದಷ್ಟು ಹೊಸ ಮಾಹಿತಿಗಳು ಹೊರಬರುತ್ತಿವೆ. ಪಾರ್ಥ ಚಟರ್ಜಿ ಕೋಲ್ಕತ್ತದಲ್ಲೆ 10ಕ್ಕೂ ಅಧಿಕ ಐಷರಾಮಿ ಮನೆಗಳನ್ನು ಹೊಂದಿದ್ದಾರೆ. ಕೆಲವು ಫ್ಲಾಟ್ಗಳಲ್ಲಿ ಕೇವಲ ಅವರ ನಾಯಿಗಳು ಮಾತ್ರ ಇವೆ. ಅವುಗಳಿಗೆ ಹವಾ ನಿಯಂತ್ರಣ ವ್ಯವಸ್ಥೆ ಸಹಿತ ಸಕಲ ಆಧುನಿಕ ವ್ಯವಸ್ಥೆಗಳನ್ನು ಮಾಡಿಕೊಡಲಾಗಿತ್ತು.
ಬುಧವಾರ ಅರ್ಪಿಗಾಗೆ ಸೇರಿದ ಇನ್ನೊಂದು ಮನೆ ಮೇಲೆ ದಾಳಿ ಮಾಡಿದಾಗ ಮತ್ತೆ ಹಣದ ಮೂಟೆಗಳು ಪತ್ತೆಯಾಗಿವೆ. ನಾಲ್ವರು ಅಧಿಕಾರಿಗಳ ಹಣ ಎಣಿಸುವ ಯಂತ್ರ ತಂದು ತಡರಾತ್ರಿ ತನಕ ಎಣಿಕೆ ಕಾರ್ಯ ಮಾಡಿದ್ದಾರೆ. ಸುಮಾರು 29 ಕೋ.ರೂ. ಎಣಿಕೆ ಮುಗಿದಿದೆ. ಇನ್ನೂ ಎಣಿಕೆ ಬಾಕಿಯಿದೆ.5 ಕೆಜಿಯಷ್ಟು ಚಿನ್ನ ಸಿಕ್ಕಿದೆ ಎಂದು ಇ.ಡಿ.ಮೂಲಗಳು ತಿಳಿಸಿವೆ.
ನೋಟಿನ ಕಂತೆಗಳನ್ನು ಕಬ್ಬಿಣದ ಟ್ರಂಕ್ಗಳಲ್ಲಿ ತುಂಬಿಸಿ ಲಾರಿಯಲ್ಲಿ ಇ.ಡಿ. ಕಚೇರಿಗೆ ಸಾಗಿಸಲಾಗುತ್ತದೆ. ವಶಪಡಿಸಿಕೊಂಡ ಹಣ ಸುರಕ್ಷಿತವಾಗಿಡುವುದೇ ಅಧಿಕಾರಿಗಳಿಗೆ ತಲೆನೋವಿನ ಕೆಲಸವಾಗಿದೆ.
ಸಚಿವನ ಆಪ್ತೆಯ ಮನೆಯಲ್ಲಿ ಮತ್ತೆ ಹಣದ ರಾಶಿ ಪತ್ತೆ
Recent Comments
ಕಗ್ಗದ ಸಂದೇಶ
on