ಯೋಕೋಸೋ ಸಿಜ್ಲರ್ ಮತ್ತು ವೋಕ್ ಶುಭಾರಂಭ
ಪುಣೆ : ಕಾರ್ಕಳ ಕಾಬೆಟ್ಟು ನಿವಾಸಿ ವಿನಯ್ ಶ್ಯಾಮ್ ಹೆಗ್ಡೆ ಅವರ ಪಾಲುದಾರಿಕೆಯಲ್ಲಿ ಪುಣೆಯಲ್ಲಿ ಜಪಾನೀಸ್ ಮತ್ತು ಚೈನೀಸ್ ರೆಸ್ಟೋರೆಂಟ್ ಯೋಕೋಸೋ ಸಿಜ್ಲರ್ ಮತ್ತು ವೋಕ್ ಹೊಟೇಲ್ ಜು. 22ರಂದು ಶುಭಾರಂಭಗೊಂಡಿತು. ಹವಾನಿಯಂತ್ರಿತ ರೆಸ್ಟೋರೆಂಟ್ ಆಗಿರುವ ಇಲ್ಲಿ ಏಕಕಾಲದಲ್ಲಿ 250 ಮಂದಿ ಕುಳಿತುಕೊಳ್ಳುವ ಆಸನದ ವ್ಯವಸ್ಥೆಯಿದೆ.

ಸ್ಥಳೀಯ ಜನಪ್ರತಿನಿಧಿ ಗಣೇಶ್ ಬಿಡ್ತಿಕರ್ ಹೊಟೇಲ್ ಉದ್ಘಾಟಿಸಿದರು. ಸಿದ್ಧಾರ್ಥ್ ಬೊಕರೆ ಸೇರಿದಂತೆ ಸಿನಿಮಾ ತಾರೆಯರು, ಪೊಲೀಸ್ ಅಧಿಕಾರಿಗಳು, ವಿವಿಧ ಕ್ಷೇತ್ರದ ಗಣ್ಯರು ನೂತನ ಹೊಟೇಲ್ಗೆ ಶುಭಹಾರೈಸಿದರು.

ಬಗೆ-ಬಗೆಯ ಜಪಾನೀಸ್ ಐಟಂ, ಸ್ಮೋಕಿ ಡಿಶಸ್ಸ್ ಲಭ್ಯವಿದ್ದು, ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವ, ಇನ್ನಿತರ ಕಾರ್ಯಕ್ರಮಗಳನ್ನು ಹೊಟೇಲ್ನಲ್ಲಿ ಆಚರಿಸಬಹುದಾಗಿದೆ ಎಂದು ಸಂಸ್ಥೆಯ ಪಾಲುದಾರ ವಿನಯ್ ಹೆಗ್ಡೆ ತಿಳಿಸಿದ್ದಾರೆ.