Friday, August 19, 2022
spot_img
Homeಸ್ಥಳೀಯ ಸುದ್ದಿಮೋದಿ, ಯೋಗಿಯಂತ ಧೈರ್ಯ ಬೊಮ್ಮಾಯಿ ಸರಕಾರಕ್ಕಿಲ್ಲ - ಪ್ರಮೋದ್ ಮುತಾಲಿಕ್ ಕಿಡಿ

ಮೋದಿ, ಯೋಗಿಯಂತ ಧೈರ್ಯ ಬೊಮ್ಮಾಯಿ ಸರಕಾರಕ್ಕಿಲ್ಲ – ಪ್ರಮೋದ್ ಮುತಾಲಿಕ್ ಕಿಡಿ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಮತ್ತು ಉ. ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಂತೆ ಬೊಮ್ಮಾಯಿ ಸರಕಾರಕ್ಕೆ ಗಟ್ಸ್‌ ಇಲ್ಲ. ಕಾರಣ ಭಯ. ಕೇವಲ ಮತಕ್ಕಾಗಿ ಅಲೆದಾಡುತ್ತಿದ್ದಾರೆ ಅಷ್ಟೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಾಜ್ಯ ಸರಕಾರದ ವಿರುದ್ದ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ, ಯೋಗಿಯ ಮಾದರಿಯಲ್ಲಿ ಸ್ಥೈರ್ಯವಾಗಲೀ, ಧೈರ್ಯವಾಗಲೀ ಇವರಿಗಿಲ್ಲ. ಆ ನೈತಿಕತೆ, ಮಾನಸಿಕತೆಯನ್ನೂ ಇವರು ಉಳಿಸಿಕೊಂಡಿಲ್ಲ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧಿಸಿದಂತೆ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಲೆ, ಹಲ್ಲೆಯಂತಹ ಘಟನೆಗಳ ಸಂದರ್ಭದಲ್ಲಿ ಉಗ್ರ ಹೇಳಿಕೆಗಳು ಸರ್ಕಾರದಿಂದ ಬರುತ್ತವೆ. ಆದರೆ ಮುಂದೆ ಯಾವುದೇ ಕ್ರಮ ಇರುವುದಿಲ್ಲ. ಈವರೆಗಿನ ಘಟನೆಗಳಿಗೆ ಸಂಬಂಧಿಸಿದಂತೆ ಯಾವುದೇ ಕಠಿಣ ಪ್ರಕ್ರಿಯೆಗಳು ನಡೆದಿಲ್ಲ. ಪ್ರವೀಣ್ ಹತ್ಯೆಯಾಗಿರುವುದು ಇದೇ ಕಾರಣಕ್ಕೆ. ಕಾನೂನು ಮತ್ತು ಸರಕಾರದ ವೈಫಲ್ಯಗಳಿಂದಾಗಿ ಪದೇಪದೇ ಘಟನೆಗಳು ಮರು ಕಳಿಸುತ್ತಿವೆ. ಹಿಂದೂಗಳ ಸುರಕ್ಷತೆ ಬಗ್ಗೆ ಬಿಜೆಪಿಗೆ ನಿಜವಾದ ಕಾಳಜಿ ಇದ್ದರೆ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಲಿ ಎಂದು ಆಗ್ರಹಿಸಿದರು.

ಬಿಜೆಪಿ ಯುವಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಮಾತನಾಡಿದ್ದು, ಹಂತಕರ ವಿರುದ್ಧ ಭಯೋತ್ಪಾದನಾ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ತ್ವರಿತವಾಗಿ ಹಂತಕರಿಗೆ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ನೆಲೆಸಬೇಕಾದರೆ, ಮುಲ್ಲಾ, ಮೌಲ್ವಿ ಎಸ್ ಡಿಪಿಐ ಪಿಎಫ್ಐ ನ್ನು ಹದ್ದುಬಸ್ತಿನಲ್ಲಿಡಿ ಇಲ್ಲವಾದಲ್ಲಿ ಹಿಂದೂ ಸಮಾಜ ತಿರುಗಿ ಬೀಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಇಂತಹ ಕ್ರೌರ್ಯವನ್ನು ಹದ್ದುಬಸ್ತಿನಲ್ಲಿಡಬೇಕಾದರೆ, ಹಂತಕರನ್ನು ಒಂದೋ ಎನ್ ಕೌಂಟರ್ ಮಾಡಿ, ಇಲ್ಲವಾದಲ್ಲಿ ನ್ಯಾಯಾಂಗದ ಮೂಲಕ ತ್ವರಿತವಾಗಿ ನ್ಯಾಯ ಕೊಡಿಸಿ ಶಿಕ್ಷೆ ವಿಧಿಸಿ ಎಂದು ಆಗ್ರಹಿಸಿದ್ದಾರೆ. 

ಇತ್ತೀಚೆಗೆ ನಡೆದ ಹರ್ಷ ಹತ್ಯೆ ಪ್ರಕರಣದಲ್ಲಿ ಸರ್ಕಾರ ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಆದರೆ ಈಗ ಹರ್ಷನ ಹಂತಕರು ಜೈಲಿನಲ್ಲಿದ್ದುಕೊಂಡು ವಿಡೀಯೋ ಕಾಲ್ ಮಾಡುವ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಸರ್ಕಾರ ಇಂತಹ ಹಂತಕರನ್ನು ಹದ್ದುಬಸ್ತಿನಲ್ಲಿಡದೇ ಇದ್ದಲ್ಲಿ ಇನ್ನಷ್ಟು ಹಿಂದೂಗಳು ಬಲಿಯಾಗಬೇಕಾಗುತ್ತದೆ. ಹಿಂದೂಗಳು ತಿರುಗಿಬಿದ್ದರೆ ಒಬ್ಬನೇ ಮುಸ್ಲಿಂ ಇರಲ್ಲ ಎಂದು ಗುಡುಗಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!