Homeಸುದ್ದಿ15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅಧಿಕಾರ ಸ್ವೀಕಾರ

Related Posts

15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅಧಿಕಾರ ಸ್ವೀಕಾರ

ಹೊಸದಿಲ್ಲಿ: ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಇಂದು ಬೆಳಗ್ಗೆ ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶ ಎನ್‌. ವಿ. ರಮಣ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಮೂಲಕ ದ್ರೌಪದಿ ಬುಡಕಟ್ಟು ಜನಾಂಗದಿಂದ ರಾಷ್ಟ್ರಪತಿಯಾದ ಮೊದಲ ವ್ಯಕ್ತಿ ಮತ್ತು ಸ್ವತಂತ್ರ ಭಾರತದ ಎರಡನೇ ಮಹಿಳಾ ರಾಷ್ಟ್ರಪತಿ ಎಂಬ ಹಿರಿಮೆಗಳಿಗೆ ಪಾತ್ರರಾಗಿದ್ದಾರೆ.
ದೇಶದ ಕೋಟ್ಯಂತರ ಜನರ ನಿರೀಕ್ಷೆ, ಆಕಾಂಕ್ಷೆ ಮತ್ತು ಹಕ್ಕುಗಳ ಪ್ರತೀಕವಾಗಿರುವ ಪವಿತ್ರ ಸಂಸತ್ತಿನಲ್ಲಿ ನಿಂತು ನಾನು ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಹೊಸ ಜವಾಬ್ದಾರಿಯನ್ನು ನಿಭಾಯಿಸಲು ನಿಮ್ಮ ನಂಬಿಕೆ ಮತ್ತು ಬೆಂಬಲವೇ ನನಗೆ ಶಕ್ತಿಯಾಗಲಿದೆ ಎಂದು ಪ್ರತಿಜ್ಞಾ ವಿಧಿಯ ಬಳಿಕ 64ರ ಹರೆಯದ ದ್ರೌಪದಿ ಮುರ್ಮು ಹೇಳಿದರು.

LEAVE A REPLY

Please enter your comment!
Please enter your name here

Latest Posts

error: Content is protected !!