Homeಸುದ್ದಿಕಾಲೇಜ್‌ ಕ್ಯಾಂಪಸ್‌ ಎದುರೇ ನಶೆಯಲ್ಲಿ ತೇಲಾಡಿದ ವಿದ್ಯಾರ್ಥಿಗಳ ವೀಡಿಯೊ ವೈರಲ್‌

Related Posts

ಕಾಲೇಜ್‌ ಕ್ಯಾಂಪಸ್‌ ಎದುರೇ ನಶೆಯಲ್ಲಿ ತೇಲಾಡಿದ ವಿದ್ಯಾರ್ಥಿಗಳ ವೀಡಿಯೊ ವೈರಲ್‌

*ಗೃಹ ಸಚಿವರ ತವರು ಜಿಲ್ಲೆ ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನ ಎದುರು ನಡೆದ ಘಟನೆ
ಶಿವಮೊಗ್ಗ : ಗೃಹ ಸಚಿವ ಆರಗ ಜ್ಞಾನೇಂದ್ರ ತವರು ಜಿಲ್ಲೆಯಾಗಿರುವ ಶಿವಮೊಗ್ಗದ ಪ್ರತಿಷ್ಠಿತ ಖಾಸಗಿ ಕಾಲೇಜೊಂದರ ಇಬ್ಬರು ವಿದ್ಯಾರ್ಥಿಗಳು ಕಾಲೇಜು ಮುಂದೆಯೇ ನಶೆಯಲ್ಲಿ ತೂರಾಡಿದ ವೀಡಿಯೊ ವೈರಲ್‌ ಆಗಿದೆ. ಎದ್ದು ನಿಂತು ಸರಿಯಾಗಿ ಎರಡು ಹೆಜ್ಜೆ ಇಡುವುದು ಕೂಡಾ ಆ ವಿದ್ಯಾರ್ಥಿಗಳಿಂದ ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ನಶೆ ಏರಿ ಹೋಗಿತ್ತು. ಕಾಲೇಜು ಗೇಟ್‌ ಮುಂದೆ ವಿದ್ಯಾರ್ಥಿಗಳು ಈ ರೀತಿ ತೂರಾಡುತ್ತಿದ್ದರೆ, ಕೆಲವು ವಿದ್ಯಾರ್ಥಿಗಳು ವಿಡಿಯೋ ಮಾಡುತ್ತಿದ್ದಾರೆ. ಜನರು ಸುತ್ತ ನಿಂತು ನೀಡುತ್ತಿದ್ದಾರೆ. ಬಸ್‌ನಲ್ಲಿದ್ದವರು ಯಾರೋ ಈ ಇಡೀ ಒಂದು ನಿಮಿಷದ ದೃಶ್ಯವನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಕಿಸ್ಸಿಂಗ್‌ ವೀಡಿಯೊ ಬೆಳಕಿಗೆ ಬಂದಿತ್ತು. ಈ ಸಂಬಂಧ ಎಂಟು ವಿದ್ಯಾರ್ಥಿಗಳು ಸೆರೆಯಾಗಿದ್ದಾರೆ. ಅದರ ಬೆನ್ನಿಗೆ ಕಾಲೇಜು ವಿದ್ಯಾರ್ಥಿಗಳು ನಶೆಯಲ್ಲಿ ತೂರಾಡುವ ವೀಡಿಯೊ ವೈರಲ್‌ ಆಗಿ ಕಾಲೇಜು ಮಕ್ಕಳ ನೈತಿಕತೆಯ ಬಗ್ಗೆಯೇ ಪ್ರಶ್ನೆಗಳೇಳುವಂತೆ ಮಾಡಿದೆ.
ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿ ಗಾಳಿಯಲ್ಲಿ ತೂರಾಡುತ್ತಿರುವುದು. ನಿಂತು ಹೆಜ್ಜೆ ಹಾಕುವುದಕ್ಕೂ ಆಗದೆ, ನಶೆಯಲ್ಲಿ ಒದ್ದಾಡುತ್ತಿರುವ ಪರಿ ನೋಡಿದರೆ, ಜಿಲ್ಲೆಯ ಪೊಷಕರು ಆತಂಕ ಪಡುವಂತಾಗಿದೆ. ಈ ವಿದ್ಯಾರ್ಥಿಗಳು ತರಗತಿಗಳು ನಡೆಯುತ್ತಿರುವ ಸಂದರ್ಭದಲ್ಲಿ, ತರಗತಿಗೆ ಹೋಗದೆ ಡ್ರಗ್ಸ್ ಸೇವಿಸಿ, ಕ್ಯಾಂಪಸ್‌ನಲ್ಲಿ ಬಿದ್ದುಕೊಂಡಿದ್ದಾರೆ. ಇದನ್ನು ಸಹಪಾಠಿ ವಿದ್ಯಾರ್ಥಿಗಳು ವಿಡಿಯೋ ಮಾಡಿಕೊಂಡಿದ್ದಾರೆ.
ಶನಿವಾರ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿದ್ಯಾರ್ಥಿಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶಿಕ್ಷಣ ಸಂಸ್ಥೆಯ ಹೆಸರಿನ ಟ್ಯಾಗ್ ಲೈನ್‌ನಲ್ಲೇ ವೈರಲ್ ಆಗಿದೆ.
ಈ ವಿದ್ಯಾರ್ಥಿಗಳು ಮೊದಲ ಬಾರಿಗೆ ಡ್ರಗ್ಸ್ ಸೇವಿಸಿರಬಹುದು ಎನ್ನಲಾಗಿದೆ. ಯಾರೋ ಸ್ನೇಹಿತರ ಜೊತೆ ಸೇರಿ ಗಾಂಜಾ ಇಲ್ಲವೇ ಡ್ರಗ್ಸ್ ಸೇವಿಸಿರಬಹುದು ಎಂದು ಹೇಳಲಾಗುತ್ತಿದೆ. ಇದರ ಹಿಂದೆ ವ್ಯವಸ್ಥಿತ ನೆಟ್ ವರ್ಕ್ ಕೆಲಸ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!