ಕಾರ್ಮಿಕರಿಗೆ ಸರಕಾರ ಬಂಪರ್‌ ಕೊಡುಗೆ : ಸವಲತ್ತುಗಳ ಮೇಲಿನ ಷರತ್ತು ಸಡಿಲಿಕೆ

ಬೆಂಗಳೂರು : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರ ನೀಡುವ ಸವಲತ್ತುಗಳ ಮೇಲಿನ ಷರತ್ತುಗಳನ್ನು ಸಡಿಲಿಸಿ ಹಲವು ಬಂಪರ್ ಕೊಡುಗೆಗಳನ್ನು ನೀಡಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು ಕರ್ನಾಟಕ-ಸಿದ್ದುಪಡಿ) ನಿಯಮ-2022ರಲ್ಲಿ ಕೆಲವು ಶರತ್ತುಗಳನ್ನು ಸರಿಸಲು ನಿರ್ಧರಿಸಲಾಗಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಜಾರಿ ಮಾಡಲಾಗಿರುವ ಹಲವು ಯೋಜನೆಗಳು ಫಲಾನುಭವಿಗಳಿಗೆ ನೀಡಲಾಗುತ್ತಿರುವ ಧನ ಸಹಾಯದಲ್ಲಿ ಏರಿಕೆ ಮಾಡಲಾಗಿದೆ. ಜತೆಗೆ ನೋಂದಣಿ ವಂಶಿಗೆ ರಿಯಾಯಿತಿ, ಜೇಷ್ಠತೆ ಆಧಾರದಲ್ಲಿ ಟೂಲ್‌ ಕಿಟ್‌ ವಿತರಣೆ ಸೇರಿದಂತೆ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು ಮಂಡಿಸಿದ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ಮಂಡಳಿ ಶ್ರಮಿಕ ಫಲಾನುಭವಿಗಳಿಗೆ ನೀಡುತ್ತಿರುವ ಮಾಸಿಕ ಪಿಂಚಣಿಯನ್ನು 2 ಸಾವಿರ ರೂ.ಗಳಿಂದ 3 ಸಾವಿರ ರೂ.ಗಳಿಗೆ ಏರಿಕೆ, ಮನೆ ಕಟ್ಟಲು 10 ಕಂತಿನ ಸಹಾಯಧನ, ಇನ್ನೂ ಹಲವು ಸೌಲಭ್ಯಗಳಿಗೆ ಸರಕಾರ ಅಸ್ತು ಎಂದಿದೆ.
ಫಲಾನುಭವಿ ಅರ್ಜಿಯನ್ನು ಅಧಿಕಾರಿಗಳು ತಿರಸ್ಕರಿಸಿದ ಪಕ್ಷದಲ್ಲಿ ಮೇಲ್ಮನವಿ ಸಲ್ಲಿಸಿ ಪುನರ್ ಪರಿಶೀಲನೆಗೆ ಮನವಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಪಿಂಚಣಿ ಆರ್ಜಿ ಸಲ್ಲಿಕೆಯನ್ನೂ ಸಹ ಸರಳಗೊಳಿಸುವ ಮೂಲಕ ಹೆಚ್ಚಿನ ಶ್ರಮಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತಹ ತಿದ್ದುಪಡಿಗಳಿಗೂ ಅನುಮೋದನೆ ದೊರಕಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿ ನೋಂದಾಯಿತ ಸದಸ್ಯರು ದಿನ ನಿತ್ಯ ಕೆಲಸದ ಸ್ಥಳಗಳಿಗೆ ತೆರಳಲು ಸಂಚಾರ ವ್ಯವಸ್ಥೆಗೆ ಸಾಕಷ್ಟು ಮೊತ್ತ ವ್ಯಯಿಸುತ್ತಿರುವುದನ್ನು ಮನಗಂಡಿರುವ ಮಂಡಳಿ, ಸೀಮಿತ ವ್ಯಾಪ್ತಿಯಲ್ಲಿ ಕಾರ್ಮಿಕರು ಉಚಿತವಾಗಿ ಸಂಚರಿಸಲು ಕೆಎಸ್‌ಆರ್ ಟಿಸಿ ಉಚಿತ ಪಾಸ್ ನೀಡುವ ಪ್ರಸ್ತಾವನೆಗೂ ಸಮ್ಮತಿ ನೀಡಿದೆ.





























































































































































































































error: Content is protected !!
Scroll to Top