ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ಘಟಕ, ಶಾಂತಿ ನಿಕೇತನ ಯುವವೃಂದ ಕುಡಿಬೈಲು ಸಂಯುಕ್ತ ಆಶ್ರಯದಲ್ಲಿ ಸಾಹಿತ್ಯ ಸಿಂಚನ ಸರಣಿ “ಪ್ರತಿಭೆಯೆಡೆಗೆ ನಮ್ಮ ನಡಿಗೆ” ಕಾರ್ಯಕ್ರಮದಡಿ ಕುಚ್ಚೂರುವಿನಲ್ಲಿ ವಿಶೇಷ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮ ಜು. 24ರಂದು ನಡೆಯಿತು. ನವೀನ್ ಶೆಟ್ಟಿ ಮಡಾಮಕ್ಕಿ ಪ್ರತಿಭೆ ಮತ್ತು ಪ್ರಯತ್ನ ಕುರಿತು ವಿಶೇಷ ಉಪನ್ಯಾಸ ನೀಡಿ, ಪ್ರತಿಭೆಯೊಂದೇ ಸಾಲದು. ಅದರ ಜೊತೆಗೆ ಪ್ರಯತ್ನವಿದ್ದಾಗ ಯಶಸ್ಸು ಸಾಧ್ಯವೆಂದರು.
ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಶಾಂತಿ ನಿಕೇತನದ ನೂತನ ಅಧ್ಯಕ್ಷ ದೀಕ್ಷಿತ್ ನಾಯ್ಕ್, ಕ.ಸಾ.ಪ. ಉಡುಪಿ ಜಿಲ್ಲೆಯ ಕೋಶಾಧ್ಯಕ್ಷ ಮನೋಹರ ಪಿ., ಪಿಸಿಯೋಥೆರಪಿಸ್ಟ್ ನವೀನ್ ಶೆಟ್ಟಿ ಮಡಾಮಕ್ಕಿ, ಅಂತರಾಷ್ಟ್ರೀಯ ಯೋಗಪಟು, ಬಾಲಪ್ರತಿಭೆ ಶಿವಾನಿ ಶೆಟ್ಟಿ ಕುಚ್ಚೂರು, ಕರ್ನಾಟಕ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಹರೀಶ್ ಪೂಜಾರಿ, ಕ.ಸಾ.ಪ. ಹಿರಿಯ ಸದಸ್ಯ ಹೆಬ್ಬಾರ್ ಬೇಳಂಜೆ, ಶಾಂತಿ ನಿಕೇತನ ಕುಡಿಬೈಲು ಕುಚ್ಚೂರು ಇದರ ಸಂಚಾಲಕ ನರೇಂದ್ರ ಎಸ್. ಉಪಸ್ಥಿತರಿದ್ದರು.
ಅಂತರರಾಷ್ಟ್ರೀಯ ಯೋಗ ಪಟು ಶಿವಾನಿ ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕ.ಸಾ.ಪ. ಹೆಬ್ರಿ ತಾಲೂಕು ಗೌರವ ಕಾರ್ಯದರ್ಶಿ ಮಂಜುನಾಥ ಕೆ. ಶಿವಪುರ ಸ್ವಾಗತಿಸಿ, ಸೌಜನ್ಯ ಮತ್ತು ತಂಡದವರು ಪ್ರಾರ್ಥಿಸಿದರು. ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ಪ್ರೀತೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಾಂತಿನಿಕೇತನ ಯುವ ಘಟಕದ ವೈಷ್ಣವಿ ವಂದಿಸಿದರು.
ಕ.ಸಾ.ಪ. ಹೆಬ್ರಿ ಘಟಕ ಸಾಹಿತ್ಯ ಸಿಂಚನ – ಪ್ರತಿಭೆಯೆಡೆಗೆ ನಮ್ಮ ನಡಿಗೆ
Recent Comments
ಕಗ್ಗದ ಸಂದೇಶ
on