Wednesday, August 17, 2022
spot_img
Homeಹೆಬ್ರಿ ಸುದ್ದಿಶಿವಪುರ : ಗುಡ್ಡ ಕುಸಿತ

ಶಿವಪುರ : ಗುಡ್ಡ ಕುಸಿತ

ಹೆಬ್ರಿ : ಉಡುಪಿ- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಶಿವಪುರ ಮೇಲಪೇಟೆ ಮೀನು ಮಾರ್ಕೆಟ್‌ ಬಳಿಯಿರುವ ಖಾಸಗಿ ಮೊಬೈಲ್‌ ಕಂಪನಿಯ ಮೊಬೈಲ್‌ ಟವರ್‌ ತೀರಾ ಅಪಾಯದ ಸ್ಥಿತಿಯಲ್ಲಿದೆ. ಟವರ್‌ನ ಒಂದು ಬದಿ ಗುಡ್ಡ ಕುಸಿದಿದ್ದು, ಇದೀಗ ಟವರ್‌ ಅಪಾಯದ ಸ್ಥಿತಿಯಲ್ಲಿದೆ. ಪ್ರತಿದಿನ ಇದೆ ದಾರಿಯಲ್ಲಿ ನೂರಾರು ವಿದ್ಯಾರ್ಥಿಗಳು, ಕಾರ್ಮಿಕರು, ಸಾರ್ವಜನಿಕರು ಸಂಚರಿಸುತ್ತಿದ್ದು, ಅವರು ಆತಂಕದಲ್ಲೇ ಸಾಗುತ್ತಿದ್ದಾರೆ. ಟವರ್‌ ನ ಸಮೀಪದಲ್ಲಿ ಹಲವಾರು ಮನೆಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಅಂಗಡಿಗಳಿದ್ದು ದಿನನಿತ್ಯ ಭಯದಲ್ಲಿ ವ್ಯಾಪಾರ ಮಾಡುವಂತಾಗಿದೆ. ಅದರ ಅಡಿಯಲ್ಲಿ ವಿದ್ಯುತ್ ಟ್ರಾನ್ಸ್‌ ಫಾರ್ಮರ್‌ ಇದ್ದು ಅದು ಬಿದ್ದಲ್ಲಿ ಅಪಾಯ ಖಚಿತ ಎಂದು ಸ್ಥಳೀಯರು ಭಯದ ವಾತಾವರಣದಲ್ಲಿ ಬದುಕು ನಡೆಸುವಂತಾಗಿದೆ. ಟವರ್ ಖಾಸಗಿ ಜಾಗದಲ್ಲಿದೆ. ಸಂಬಂಧಪಟ್ಟ ಕಂಪೆನಿಯವರು ಟವರ್‌ಗೊಂದು ಕಾಯಕಲ್ಪ ನೀಡದೇ ನಿರ್ಲಕ್ಷ್ಯವಹಿಸದೇ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಸಂಬಂಧಪಟ್ಟವರು ಕೂಡಲೇ ಸ್ಪಂದಿಸಬೇಕೆಂದು ಸ್ಥಳೀಯರು ಆಗ್ರಹಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!