Wednesday, August 17, 2022
spot_img
Homeಸುದ್ದಿಚಿತ್ತೂರು ಬಳಿ ಅಪಘಾತ: ಬೆಂಗಳೂರಿನ ಮೂವರು ಪೊಲೀಸರು ಮೃತ

ಚಿತ್ತೂರು ಬಳಿ ಅಪಘಾತ: ಬೆಂಗಳೂರಿನ ಮೂವರು ಪೊಲೀಸರು ಮೃತ

ಬೆಂಗಳೂರು : ಆಂಧ್ರ ಪ್ರದೇಶದ ಚಿತ್ತೂರು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಮೂವರು ಪೊಲೀಸರು ಸಾವನಪ್ಪಿದ್ದಾರೆ. ಅಪಘಾತ ಪೂತಲಪಟ್ಟು ಮಂಡಲ ಪಿ. ಕೊಟ್ಟಕೋಟ ರೈಲ್ವೆ ಕೆಳ ಸೇತುವೆ ಬಳಿ ನಡೆದಿದೆ. ಸಬ್‌ಇನ್‌ಸ್ಪೆಕ್ಟರ್ ಅವಿನಾಶ್, ಅನಿಲ್ ಹಾಗೂ ಡ್ರೈವರ್ ಸ್ಥಳದಲ್ಲೇ ಸಾವನಪ್ಪಿದ್ದು, ದೀಕ್ಷಿತ್ ಹಾಗೂ ಕಾನ್ಸ್‌ಟಬಲ್ ಶರಣ ಬಸವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅವರನ್ನು ಆಸ್ಪತ್ರಗೆ ದಾಖಲಾಗಿಸಲಾಗಿದೆ. ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಚಿತ್ತೂರು ಬಳಿ ಕಾರು ಅಪಘಾತವಾಗಿದ್ದು, ಕೇಸ್ ಸಂಬಂಧ ಆಂಧ್ರ ಪ್ರದೇಶದ ಚಿತ್ತೂರಿಗೆ ನಿನ್ನೆ (ಶನಿವಾರ) ರಾತ್ರಿ ಶಿವಾಜಿನಗರ ಪೊಲೀಸರ ತಂಡ ತೆರಳಿತ್ತು. ಕರ್ನಾಟಕದಿಂದ ತಿರುಮಲಕ್ಕೆ ಇನ್ನೋವಾದಲ್ಲಿ ಹೋಗುತ್ತಿದ್ದಾಗ ಅವಘಡ ಸಂಭವಿಸಿದ್ದು, ನಿದ್ದೆ ಮಂಪರಿನಲ್ಲಿ ಡಿವೈಡರ್‌ಗೆ ಡಿಕ್ಕಿಯಾಗಿ ಅಪಘಾತವಾಗಿದೆ.
ಆರಗ ಜ್ಞಾನೇಂದ್ರ ಕಂಬನಿ: ಘಟನೆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ದಿಗ್ಭ್ರಮೆ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಗಾಯಗೊಂಡ ಸಿಬ್ಬಂದಿಗಳ ನೆರವಿಗೆ ಧಾವಿಸಿ, ಅತ್ಯುತ್ತಮ ಚಿಕಿತ್ಸೆ ದೊರಕಿಸಲು ಎಲ್ಲಾ ಅಗತ್ಯ ಕ್ರಮ ಜರುಗಿಸಬೇಕು ಎಂದು ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!