Sunday, October 2, 2022
spot_img
Homeಸ್ಥಳೀಯ ಸುದ್ದಿಜು. 24ರಂದು ಸಚಿವ ವಿ. ಸುನೀಲ್‌ ಕುಮಾರ್‌ ಪ್ರವಾಸದ ವಿವರ

ಜು. 24ರಂದು ಸಚಿವ ವಿ. ಸುನೀಲ್‌ ಕುಮಾರ್‌ ಪ್ರವಾಸದ ವಿವರ

ಕಾರ್ಕಳ : ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ ಕುಮಾರ್ ರವರ ಜು.24 ರ ಪ್ರವಾಸದ ವಿವರ ಇಂತಿದೆ. ಬೆಳಿಗ್ಗೆ 8:30ಕ್ಕೆ ಆನೆಕೆರೆ ಶ್ರೀ ಕೃಷ್ಣಕ್ಷೇತ್ರ ಮಂದಿರದ ಪ್ರಮುಖರೊಂದಿಗೆ ಸಭೆ, 10.15ಕ್ಕೆ ಮಂಗಳೂರು ಲೇಡಿಹಿಲ್‌ ಶಾಲೆ ಬಳಿ ಇರುವ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಶಿಲಾನ್ಯಾಸ ಕಾರ್ಯಕ್ರಮ, ಪೂರ್ವಾಹ್ನ 11:45ಕ್ಕೆ ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ತೋಟಗಾರಿಕಾ ಉತ್ಪಾದಕ ಕಂಪೆನಿ ಮತ್ತು ಪ್ರೆಸ್ ಕ್ಲಬ್ ಕಾರ್ಕಳ ಇದರ ಸಹಯೋಗದೊಂದಿಗೆ ಕಾರ್ಕಳ ಬಿಳಿಬೆಂಡೆ ಬೀಜ ವಿತರಣಾ ಕಾರ್ಯಕ್ರಮ, ಮಧ್ಯಾಹ್ನ 12:45ಕ್ಕೆ ಬೈಲೂರು ಬಿಲ್ಲವ ಸಂಘದ ವತಿಯಿಂದ ಜರುಗುವ ಕೆಸರುಡೊಂಜಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.

LEAVE A REPLY

Please enter your comment!
Please enter your name here

Most Popular

error: Content is protected !!