ಕಾರ್ಕಳ : ಬೆಳ್ಮಣ್ ಶ್ರೀ ಲಕ್ಷ್ಮೀಜನಾರ್ದನ ಇಂಟರ್‌ನ್ಯಾಶನಲ್ ಸ್ಕೂಲ್ ಸಿ.ಬಿ.ಎಸ್.ಇ. 10ನೇ ತರಗತಿಯಲ್ಲಿ ಸತತ 14 ನೇ ಬಾರಿಗೆ ಶೇ.100 ಫಲಿತಾಂಶ ದಾಖಲಿಸಿದೆ. ಒಟ್ಟು 80 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 31 ಮಂದಿ ಡಿಸ್ಟಿಂಕ್ಷನ್‌ನೊಂದಿಗೆ ತೇರ್ಗಡೆಯಾಗಿರುತ್ತಾರೆ. ನೇಹಾ ಸತೀಶ್ ಸಫಲಿಗ ಶೇ. 96.2, ವರುಣ್ ಶೆಟ್ಟಿ ಶೇ. 95.6, ಅನುಷ್ಕಾ ಕ್ರಾಸ್ತೋ ಶೇ. 95.4 ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಆರುಷ್ ಶರಶ್ಚಂದ್ರ ಹೆಗ್ಡೆ ಹಾಗೂ ಸಮೃದ್ಧ್ ರಿತೇಶ್ ಶೆಟ್ಟಿ ತಲಾ ಶೇ. 95 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ.
ಶ್ರೀ ಲಕ್ಷ್ಮೀಜನಾರ್ದನ ಇಂಟರ್‌ನ್ಯಾಶನಲ್ ಸ್ಕೂಲ್ : ಸತತ 14ನೇ ಬಾರಿಗೆ ಶೇ.100 ಫಲಿತಾಂಶ
