Wednesday, August 17, 2022
spot_img
Homeಸ್ಥಳೀಯ ಸುದ್ದಿನಿಶಾಚರ ಚಿತ್ರದಲ್ಲಿ ಕಾರ್ಕಳದ ಕಲಾವಿದರು

ನಿಶಾಚರ ಚಿತ್ರದಲ್ಲಿ ಕಾರ್ಕಳದ ಕಲಾವಿದರು

ಬೆಂಗಳೂರು : ಕಾರ್ಕಳದ ಕಲಾವಿದರಿಂದ ನಿಶಾಚರ ಕನ್ನಡ ಚಿತ್ರ ನಿರ್ಮಾಣವಾಗಿದ್ದು, ಜು. 21ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು. ಕಾರ್ಕಳದ ಅಕ್ಷಯ್‌ ಬಂಗೇರಾ ನಟಿಸಿರುವ ಈ ಚಿತ್ರಕ್ಕೆ ಮಜಾ ಟಾಕೀಸ್‌ ಖ್ಯಾತಿಯ ಮೋಹನ್‌ ಕಾರ್ಕಳ ಅವರು ಸಂಗೀತ ಸಂಯೋಜನೆ ಮಾಡಿರುತ್ತಾರೆ.

ನಟ ಅಕ್ಷಯ್‌ ಬಂಗೇರಾ ಮಾತನಾಡಿ, ನಾಟಕದ ಮೇಲಿನ ನನ್ನ ಆಸಕ್ತಿ ಸಿನಿಮಾವರೆಗೆ ಕರೆತಂದಿದೆ. ನಿರ್ದೇಶಕ ಭಾಸ್ಕರ್‌ ಅವರ ಜೊತೆಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಭಾಗ್ಯವೆಂದರು.ಸಂಗೀತ ನಿರ್ದೇಶಕ ಮೋಹನ್‌ ಕಾರ್ಕಳ ಮಾತನಾಡಿ, ಈ ಚಿತ್ರದಲ್ಲಿ ಮೂರು ಹಾಡುಗಳಿದೆ. ಬಾಲಿವುಡ್‌ ಗಾಯಕ ನಿಹಾಲ್‌ ತಾವ್ರೋ ಹಾಡಿರುತ್ತಾರೆ. ಭಾಸ್ಕರ್‌ ಜಿ., ವಿಜೇಶ್‌ ದೇವಾಡಿಗ ಚಿತ್ರಕ್ಕೆ ಸಾಹಿತ್ಯ ರಚಿಸಿದ್ದು, ಖ್ಯಾತ ಗಾಯಕರಾದ ಅನನ್ಯ ಭಟ್‌, ಚಿನ್ಮಯ್‌, ವಿದ್ಯಾ ಸುವರ್ಣ, ಲಾಸ್ಯ ಹಾಡಿರುತ್ತಾರೆ ಎಂದು ತಿಳಿಸಿದರು.ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ಆರ್.‌ ಜನಾರ್ದನಯ್ಯ, ನೇತ್ರಾವತಿ ಜೆ., ಲತಾ ಬಿ.ಆರ್., ಸಹ ನಿಮಾರ್ಪಕಿ ಬೃಂದಾ, ನಿರ್ದೇಶಕ ಭಾಸ್ಕರ್‌ ಜಿ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!