ಮಂಗಳೂರು ಆ.1 : ಮಳಲಿ ಮಸೀದಿ ತೀರ್ಪು

ಮಂಗಳೂರು: ರಾಜ್ಯಾದ್ಯಂತ ಕುತೂಹಲ ಕೆರಳಿಸಿರುವ ಮಂಗಳೂರಿನ ಗುರುಪುರ ಸಮೀಪದ ಮಸೀದಿಯ ವಿವಾದದ ತೀರ್ಪು ಆ.1ರಂದು ಪ್ರಕಟವಾಗಲಿದೆ. ಮಸೀದಿಯನ್ನು ಜೀರ್ಣೋದ್ಧಾರಕ್ಕಾಗಿ ಅಗೆದಾಗ ಅದರಲ್ಲಿ ದೇವಸ್ಥಾನವನ್ನು ಹೋಲುವ ರಚನೆ ಕಂಡು ಬಂದಿದ್ದು, ಬಳಿಕ ಈ ಮಸೀದಿ ಹಿಂದು ಮತ್ತು ಮುಸ್ಲಿಮರ ನಡುವೆ ವಿವಾದದ ಕೇಂದ್ರವಾಗಿದೆ. ಕಮಿಷನರ್‌ ಮೂಲಕ ಕಟ್ಟಡದ ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಲು ತನಿಖೆ ಮಾಡಿಸಬೇಕೆಂದು ಹಿಂದು ಪರ ಸಂಘಟನೆಗಳು ಸಿವಿಲ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿವೆ. ಸಿವಿಲ್‌ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಬಾರದು ಎಂದು ಸ್ಥಳೀಯರಾದ ಮನೋಜ್‌ ಕುಮಾರ್‌, ಧನಂಜಯ ಮತ್ತಿತರರು ಸಲ್ಲಿಸಿದ್ದ ಅರ್ಜಿ ಹೈಕೋರ್ಟಿನಲ್ಲಿ ವಜಾಗೊಂಡ ಬಳಿಕ ವಿಚಾರಣೆಗೆ ಹಾದಿ ಸುಗಮವಾಗಿತ್ತು. ಆದೇಶ ಪ್ರತಿ ಸಿಕ್ಕಿದ ಬಳಿಕ ಸಿವಿಲ್‌ ನ್ಯಾಯಾಲಯ ಆ.1ಕ್ಕೆ ತೀರ್ಪನ್ನು ಕಾದಿರಿಸಿದೆ.
ಹಿಂದು ದೇವಸ್ಥಾನವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದ್ದು, ಈ ಸ್ಥಳವನ್ನು ಹಿಂದುಗಳಿಗೆ ಬಿಟ್ಟುಕೊಡಬೇಕೆಂದು ಹಿಂದುಗಳು ವಾದಿಸುತ್ತಿದ್ದಾರೆ. ಮಸೀದಿ ನಿರ್ಮಾಣವಾದ ಕಾಲದಲ್ಲಿ ವಾಸ್ತುಶೈಲಿ ಅದೆರೀತಿ ಇತ್ತು, ಹೀಗಾಗಿ ಇದು ಹಿಂದು ದೇವಾಲಯವಲ್ಲ ಎಂದು ಮುಸ್ಲಿಮರು ವಾದಿಸುತ್ತಿದ್ದಾರೆ. ಈ ನಡುವೆ ವೀರಶೈವ ಸಮುದಾಯದವರು ಇದು ಹಿಂದಿನ ವೀರಶೈವ ಮಠವಾಗಿತ್ತು ಎಂಬ ಹೇಳಿಕೆ ನೀಡಿದ್ದಾರೆ.

error: Content is protected !!
Scroll to Top