ಕಾರ್ಕಳ : ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘ, ಕಾರ್ಕಳ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ನಿ. ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಯುಕ್ತ ಆಶ್ರಯದಲ್ಲಿ ನಮ್ಮ ಬೆಳೆ ನಮ್ಮ ಬಾಂಡ್- ಕಾರ್ಕಳ ಬಿಳಿ ಬೆಂಡೆ ವಿಚಾರ ವಿನಿಮಯ ಹಾಗೂ ಬೆಂಡೆ ಬೀಜ ವಿತರಣೆ ಕಾರ್ಯಕ್ರಮವು ಜು. 24 ರಂದು ಪೂರ್ವಾಹ್ನ 11 ಗಂಟೆಗೆ ಕುಂಟಲ್ಪಾಡಿ ರೈತ ಉತ್ಪಾದಕ ಕಂಪನಿ ಆವರಣದಲ್ಲಿ ಜರುಗಲಿದೆ. ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ ಅಧ್ಯಕ್ಷತೆ ವಹಿಸಲಿದ್ದು, ಸಚಿವ ವಿ. ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿರುವರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಶರೀಫ್, ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಅಂತೋನಿ ಡಿʼಸೋಜಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಆರ್.ಬಿ. ಜಗದೀಶ, ಬ್ರಹ್ಮಾವರ ವ.ಕೃ.ತೋ.ಸಂ. ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಲಕ್ಷ್ಮಣ್, ಬ್ರಹ್ಮಾವರ ಕೆ.ವಿ.ಕೆ. ಮುಖ್ಯ ವಿಜ್ಞಾನಿ ಡಾ. ಧನಂಜಯ್ ಬಿ., ಉಡುಪಿ ತೋಟಗಾರಿಕೆ ಉಪನಿರ್ದೇಶಕಿ ಭುವನೇಶ್ವರಿ, ತಾ. ಪಂ. ಆಡಳಿತಾಧಿಕಾರಿ ಪ್ರತಿಭಾ, ಕಾರ್ಕಳ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಗುರುದತ್, ಸಂಪನ್ಮೂಲ ವ್ಯಕ್ತಿಗಳಾಗಿ ಬ್ರಹ್ಮಾವರ ಕೆ.ವಿ.ಕೆ. ತೋಟಗಾರಿಕೆ ತಜ್ಞ ಡಾ. ಚೈತನ್ಯ ಹೆಚ್.ಎಸ್., ಬ್ರಹ್ಮಾವರ ನೈ. ಕೃ. ಯೋ. ಸಹ ಸಂಶೋಧಕ ಡಾ. ಶಿವಕುಮಾರ್ ಉಪಸ್ಥಿತರಿರುವರು.