ಸಿಬಿಎಸ್‌ಇ ಪರೀಕ್ಷೆ

18ನೇ ಬಾರಿಗೆ ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್‌ ಶಾಲೆಗೆ ಶೇ. 100 ಫಲಿತಾಂಶ

ಕಾರ್ಕಳ : ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಶಾಲೆಯು ಸಿಬಿಎಸ್‌ಇ ಪರೀಕ್ಷೆಯಲ್ಲಿ ಸತತ 18ನೇ ಬಾರಿಗೆ ಶೇ. 100 ಫಲಿತಾಂಶವನ್ನು ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಒಟ್ಟು 65 ವಿದ್ಯಾರ್ಥಿಗಳಲ್ಲಿ 14 ಮಂದಿ ವಿಶಿಷ್ಟ ಶ್ರೇಣಿ, 38 ಮಂದಿ ಪ್ರಥಮ ಶ್ರೇಣಿ, 11 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ ಇಬ್ಬರು ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಮೀಕ್ಷಾ ಶಿವಶಂಕರ 98%, ಮಾನ್ಯ ಜೈನ್‌ 96.2%, ಶ್ರೀಯಾ ಜಿ. ಅಮೀನ್‌ 95.4%, ಇಶಾನಿ ಪೂಜಾರಿ 93.6%, ನಂಜೇಶ್‌ ಬಿ.ಆರ್.‌ 92%, ಕೀರ್ತನ ಜೆ. 91.2%, ಆದೀಶ್‌ ಬಾಲಕೃಷ್ಣ ಸಾಲಿಯಾನ್‌ 90.8%, ಪ್ರೀತಂ ಡಿ.ಜೆ. 90.4%, ಜೀವನ್‌ ಎಂ.ಕೆ. 90.2%, ರೋಹಿಣಿ ಹಿರೇಗೌಡ್ರ 9೦% ಅಂಕದೊಂದಿಗೆ ಸಾಧನೆ ಮಾಡಿದ್ದಾರೆ.

error: Content is protected !!
Scroll to Top