Homeಸಿನೆಮಾಅಜಯ್‌ ದೇವಗನ್‌, ಸೂರ್ಯ ಶ್ರೇಷ್ಠ ನಟರು, ಕನ್ನಡದ ಡೊಳ್ಳು, ತುಳುವಿನ ಜೀಟಿಗೆಗೆ ರಾಷ್ಟ್ರೀಯ ಪ್ರಶಸ್ತಿ

Related Posts

ಅಜಯ್‌ ದೇವಗನ್‌, ಸೂರ್ಯ ಶ್ರೇಷ್ಠ ನಟರು, ಕನ್ನಡದ ಡೊಳ್ಳು, ತುಳುವಿನ ಜೀಟಿಗೆಗೆ ರಾಷ್ಟ್ರೀಯ ಪ್ರಶಸ್ತಿ


ಹೊಸದಿಲ್ಲಿ: 2020ನೇ ಸಾಲಿನ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಶುಕ್ರವಾರ ಘೋಷಿಸಲಾಗಿದೆ. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ 30 ಭಾಷೆಗಳ 300 ಫೀಚರ್​ ಫಿಲ್ಮ್​, 150 ನಾನ್​-ಫೀಚರ್​ ಫಿಲ್ಮ್​ ಸೇರಿ 400ಕ್ಕೂ ಅಧಿಕ ಸಿನಿಮಾಗಳು ಅರ್ಜಿ ಸಲ್ಲಿಸಿದ್ದವು. ‘ಡೊಳ್ಳು’ (Dollu Kannada Cinema) ಸಿನಿಮಾ ‘ಕನ್ನಡದ ಅತ್ಯುತ್ತಮ ಚಿತ್ರ’ ಪ್ರಶಸ್ತಿ ಪಡೆದಿದೆ. ಈ ಚಿತ್ರವನ್ನು ಸಾಗರ್​ ಪುರಾಣಿಕ್​ ನಿರ್ದೇಶನ ಮಾಡಿದ್ದು, ಪವನ್​ ಒಡೆಯರ್​ ಮತ್ತು ಅಪೇಕ್ಷಾ ಪುರೋಹಿತ್​ ನಿರ್ಮಾಣ ಮಾಡಿದ್ದಾರೆ. ಜೀಟಿಗೆ ಅತ್ಯುತ್ತಮ ತುಳು ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ‘ದ ಲಾಂಗೆಸ್ಟ್​ ಕಿಸ್’ ಪುಸ್ತಕಕ್ಕೆ ‘ಸಿನಿಮಾ ಕುರಿತು ಅತ್ಯುತ್ತಮ ಕೃತಿ’ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ.
ಅಜಯ್​ ದೇವಗನ್​ (ತಾನಾಜಿ: ದಿ ಅನ್​ಸಂಗ್​ ಹೀರೋ) ಹಾಗೂ ಸೂರ್ಯ (ಸೂರರೈ ಪೋಟ್ರು) ‘ಶ್ರೇಷ್ಠ ನಟ’ ಪ್ರಶಸ್ತಿ ಹಂಚಿಕೊಂಡಿದ್ದಾರೆ. ‘ಸೂರರೈ ಪೋಟ್ರು’ ಚಿತ್ರದಲ್ಲಿನ ನಟನೆಗಾಗಿ ಅಪರ್ಣಾ ಬಾಲಮುರಳಿ ಅವರು ‘ಶ್ರೇಷ್ಠ ನಟಿ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಅಯ್ಯಪ್ಪನುಮ್​ ಕೋಶಿಯುಂ’ ಚಿತ್ರದಲ್ಲಿನ ಅಭಿನಯಕ್ಕೆ ಬಿಜು ಮೆನನ್​ ಅವರು ‘ಶ್ರೇಷ್ಠ ಪೋಷಕ ನಟ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮಿಳು ನಟಿ ಲಕ್ಷ್ಮೀ ಪ್ರಿಯಾ ಚಂದ್ರಮೌಳಿ ಅವರಿಗೆ ‘ಶ್ರೇಷ್ಠ ಪೋಷಕ ನಟಿ’ ಪ್ರಶಸ್ತಿ ನೀಡಲಾಗಿದೆ.
ಸಂಚಾರಿ ವಿಜಯ್​ ನಟನೆಯ ‘ತಲೆದಂಡ’ ಚಿತ್ರಕ್ಕೆ ‘ಪರಿಸರ ಸಂರಕ್ಷಣೆ ಕುರಿತ ಅತ್ಯುತ್ತಮ ಚಿತ್ರ’ ಪ್ರಶಸ್ತಿಯನ್ನು ನೀಡಲಾಗಿದೆ. ಈ ಸಿನಿಮಾದಲ್ಲಿ ವಿಜಯ್ ಅವರು ಭಿನ್ನವಾದ ಪಾತ್ರ ಮಾಡಿದ್ದಾರೆ. ಅವರು ಈ ಹಿಂದೆ ನಟಿಸಿದ್ದ ‘ನಾತಿಚರಾಮಿ’, ‘ಹರಿವು’ ಸಿನಿಮಾಗಳು ಕೂಡ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದವು. ಅಂಥ ನಟ ಇಂದು ನಮ್ಮೊಂದಿಗೆ ಇಲ್ಲ ಎಂಬುದು ನೋವಿನ ಸಂಗತಿ.
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ
ಶ್ರೇಷ್ಠ ನಟ: ಅಜಯ್​ ದೇವಗನ್​ ಮತ್ತು ಸೂರ್ಯ

ಶ್ರೇಷ್ಠ ನಟಿ: ಅಪರ್ಣಾ ಬಾಲಮುರಳಿ

ಶ್ರೇಷ್ಠ ಕನ್ನಡ ಸಿನಿಮಾ: ಡೊಳ್ಳು

ಶ್ರೇಷ್ಠ ಕಥಾಚಿತ್ರ: ಸೂರರೈ ಪೋಟ್ರು

ಶ್ರೇಷ್ಠ ಜನಪ್ರಿಯ ಚಿತ್ರ: ತಾನಾಜಿ

ಶ್ರೇಷ್ಠ ನಿರ್ದೇಶಕ: ಸಚ್ಚಿದಾನಂದನ್​ ಕೆ.ಆರ್​.

ಶ್ರೇಷ್ಠ ಸಿನಿಮಾ ಸ್ನೇಹಿ ರಾಜ್ಯ: ಮಧ್ಯಪ್ರದೇಶ

ಶ್ರೇಷ್ಠ ಆಡಿಯೋಗ್ರಫಿ: ಡೊಳ್ಳು ಕನ್ನಡ ಸಿನಿಮಾ

ಶ್ರೇಷ್ಠ ಚಿತ್ರಕಥೆ: ಶಾಲಿನಿ ಉಷಾ ನಾಯರ್​, ಸುಧಾ ಕೊಂಗರು (ಸೂರರೈ ಪೋಟ್ರು)

ಶ್ರೇಷ್ಠ ಹಿನ್ನೆಲೆ ಗಾಯಕಿ: ನಂಚಮ್ಮ (ಅಯ್ಯಪ್ಪನುಂ ಕೋಶಿಯುಂ)

ಶ್ರೇಷ್ಠ ಹಿನ್ನೆಲೆ ಗಾಯಕ: ರಾಹುಲ್​ ದೇಶಪಾಂಡೆ (ಮಿ ವಸಂತ್​ ರಾವ್​)

ಶ್ರೇಷ್ಠ ಮಕ್ಕಳ ಸಿನಿಮಾ: ಸುಮಿ (ಮರಾಠಿ)

ಶ್ರೇಷ್ಠ ಪರಿಸರ ಸಂರಕ್ಷಣಾ ಚಿತ್ರ: ತಲೆದಂಡ (ಕನ್ನಡ)

ಶ್ರೇಷ್ಠ ತುಳು ಸಿನಿಮಾ: ಜೀಟಿಗೆ

LEAVE A REPLY

Please enter your comment!
Please enter your name here

Latest Posts

error: Content is protected !!