Saturday, October 1, 2022
spot_img
Homeಸ್ಥಳೀಯ ಸುದ್ದಿಸಚಿವ ಸುನೀಲ್‌ ಕುಮಾರ್‌ ಶನಿವಾರದ ಕಾರ್ಯಕ್ರಮ ವಿವರ

ಸಚಿವ ಸುನೀಲ್‌ ಕುಮಾರ್‌ ಶನಿವಾರದ ಕಾರ್ಯಕ್ರಮ ವಿವರ


ಕಾರ್ಕಳ: ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಸಚಿವ ಹಾಗೂ ಕಾರ್ಕಳ ಕ್ಷೇತ್ರದ ಶಾಸಕರೂ ಆಗಿರುವ ಸುನೀಲ್‌ ಕುಮಾರ್‌ ಅವರು ಶನಿವಾರ ಕ್ಷೇತ್ರದ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 8.45ಕ್ಕೆ ಶಿವಪುರ ಕೆರೆಬೆಟ್ಟು ಅಂಗನವಾಡಿ ಕಟ್ಟಡ ಉದ್ಘಾಟನೆ, ಬೆಳಿಗ್ಗೆ 9.45ಕ್ಕೆ ಎಸ್. ಆರ್. ವಿದ್ಯಾಸಂಸ್ಥೆ ಆವರಣದಲ್ಲಿ ಎಸ್.ಆರ್. ವಿದ್ಯಾಸಂಸ್ಥೆ ಹೆಬ್ರಿ ಇದರ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ, ಬೆಳಿಗ್ಗೆ 11.30ಕ್ಕೆ ಕಾರ್ಕಳ ವಿಕಾಸ ಜನಸೇವಾ ಕಚೇರಿಯಲ್ಲಿ ಕ್ಷೇತ್ರದ ವಿವಿಧ ಸಮುದಾಯ ಭವನಗಳ ಕಾಮಗಾರಿಗಳ ಚೆಕ್‌ ವಿತರಣೆ, ಸಂಜೆ 3ಕ್ಕೆ ವಿಕಾಸ ಜನಸೇವಾ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5ಕ್ಕೆ ಉಡುಪಿ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!