Saturday, October 1, 2022
spot_img
Homeಸುದ್ದಿಎಸ್ಸೆಸೆಲ್ಸಿ ಗುಣಮಟ್ಟ ಫಲಿತಾಂಶ

ಎಸ್ಸೆಸೆಲ್ಸಿ ಗುಣಮಟ್ಟ ಫಲಿತಾಂಶ

ಕಾರ್ಕಳ : ಸರಕಾರಿ ಶಾಲಾ ವಿಭಾಗದ ಎಸ್ಸೆಸೆಲ್ಸಿ ಗುಣಮಟ್ಟ ಫಲಿತಾಂಶದಲ್ಲಿ ದುರ್ಗ ತೆಳ್ಳಾರು ಪ್ರೌಢಶಾಲೆ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. 2021-22ರ ಸಾಲಿನಲ್ಲಿ ಶೇ. 100% ಫಲಿತಾಂಶ ದಾಖಲೆಯೊಂದಿಗೆ ಗುಣಾತ್ಮಕ ಫಲಿತಾಂಶದಲ್ಲಿ 91.47 % ಗಳಿಸುವ ಮೂಲಕ ದುರ್ಗ ತೆಳ್ಳಾರು ಶಾಲೆ ಪ್ರಥಮ ಸ್ಥಾನ ಪಡೆದಿದೆ. ಜು. 21ರಂದು ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ವತಿಯಿಂದ ಕೋಟೇಶ್ವರದ ಯುವ ಮೆರಿಡಿಯನ್ ಮಿನಾಲ್ ಹಾಲ್‌ ನಲ್ಲಿ ನಡೆದ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಶಾಲಾ ಮುಖ್ಯಶಿಕ್ಷಕಿ ಸ್ಮಿತಾ ಅವರಿಗೆ ವಿದ್ಯಾಂಗ ಉಪನಿರ್ದೇಶಕರು ಪ್ರಶಸ್ತಿ ಪ್ರದಾನ ಮಾಡಿದರು. ಪೆರ್ವಾಜೆ, ಸಾಣೂರು, ರೆಂಜಾಳ, ಕಣಜಾರು ಸರಕಾರಿ ಪ್ರೌಢಶಾಲೆಗಳು ಟಾಪ್‌ 10 ಶಾಲೆಗಳ ಪಟ್ಟಿಯಲ್ಲಿವೆ.

LEAVE A REPLY

Please enter your comment!
Please enter your name here

Most Popular

error: Content is protected !!