Saturday, October 1, 2022
spot_img
Homeಸ್ಥಳೀಯ ಸುದ್ದಿಬಿಜೆಪಿ ಎಸ್.ಟಿ. ಮೋರ್ಚಾದ ವತಿಯಿಂದ ವಿಜಯೋತ್ಸವ

ಬಿಜೆಪಿ ಎಸ್.ಟಿ. ಮೋರ್ಚಾದ ವತಿಯಿಂದ ವಿಜಯೋತ್ಸವ

ಕಾರ್ಕಳ : ದೇಶದ 15ನೇ ನೂತನ ರಾಷ್ಟ್ರಪತಿಯಾಗಿ ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಅಜೆಕಾರುಪೇಟೆಯಲ್ಲಿ ಎಸ್.ಟಿ. ಮೋರ್ಚಾದ ವತಿಯಿಂದ ಜು. 22ರಂದು ಅಜೆಕಾರು ಪೇಟೆಯಲ್ಲಿ ವಿಜಯೋತ್ಸವ ನಡೆಯಿತು. ಕಾರ್ಕಳ ಬಿಜೆಪಿ ಎಸ್.ಟಿ ಮೋರ್ಚಾದ ಅಧ್ಯಕ್ಷ ಕೆ.ಪಿ. ನಾಯ್ಕ್ ಮಾತನಾಡಿ, ಬುಡಕಟ್ಟು ಸಮುದಾಯಕ್ಕೂ ಮೋದಿ ಸರಕಾರ ಆದ್ಯತೆ ನೀಡುತ್ತಿರುವುದು ಮುರ್ಮು ಆಯ್ಕೆಯಲ್ಲಿ ಸಾಬೀತಾಗಿದೆ ಎಂದರು. ಎಸ್.ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗಂಗಾಧರ ಗೌಡ, ಬಿಜೆಪಿ ಕಾರ್ಕಳ ಉಪಾಧ್ಯಕ್ಷ ಸುರೇಶ್ ಶೆಟ್ಟಿ, ಮರ್ಣೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರೀಶ್ ನಾಯಕ್, ಎಪಿಎಂಸಿ ನಿಕಟ ಪೂರ್ವ ಅಧ್ಯಕ್ಷ ರತ್ನಾಕರ ಅಮೀನ್, ಮರ್ಣೆ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ, ಶಿವಪುರ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸುಗಂಧಿ ನಾಯ್ಕ್, ಎಸ್.ಟಿ. ಮೋರ್ಚಾದ ಪದಾಧಿಕಾರಿಗಳು, ಗ್ರಾ.ಪಂ. ಸದಸ್ಯರು, ಕಾರ್ಯಕರ್ತರು ಉಪಸ್ಥಿತಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!