Homeಸ್ಥಳೀಯ ಸುದ್ದಿನಾಟಾ ದ್ವಿತೀಯ ಹಂತದ ಪರೀಕ್ಷೆ : ಕ್ರಿಯೇಟಿವ್‌ನ 7 ವಿದ್ಯಾರ್ಥಿಗಳು ಉತ್ತೀರ್ಣ

Related Posts

ನಾಟಾ ದ್ವಿತೀಯ ಹಂತದ ಪರೀಕ್ಷೆ : ಕ್ರಿಯೇಟಿವ್‌ನ 7 ವಿದ್ಯಾರ್ಥಿಗಳು ಉತ್ತೀರ್ಣ

ಕಾರ್ಕಳ : ಜು. 7ರಂದು ಉಡುಪಿ ಹಾಗೂ ಮಂಗಳೂರು ಪರೀಕ್ಷಾ ಕೇಂದ್ರದಲ್ಲಿ ನಡೆದ ರಾಷ್ಟ್ರಮಟ್ಟದ ನಾಟಾ ದ್ವಿತೀಯ ಹಂತದ (NATA PHASE-2) ಪರೀಕ್ಷೆಯಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಡೆಯುವ NATA ಎರಡನೇ ಹಂತದ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಾದ ಚಿನ್ಮಯ್ ಹವಲಗೋಳ್, ಆಕಾಶ್ ಎಚ್.ಸಿ., ಕರ್ಣಿಕಾ, ಲಹರಿ ಎಸ್.ಪಿ., ಅನ್ವಿನ್ ಬಿ.ಪಿ., ಮನೀಶ್ ಸಿ. ಗೌಡ., ಹರ್ಷಿತಾ ಎನ್.ಎ. ಅವರು ತೇರ್ಗಡೆ ಹೊಂದಿರುತ್ತಾರೆ. ವಿದ್ಯಾರ್ಥಿಗಳು ಕಾಲೇಜಿನ ಲರ್ನಿಂಗ್ ಕ್ಲಾಸಸ್ ನಲ್ಲಿ ತರಬೇತಿ ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

Latest Posts

error: Content is protected !!