ಹೊಸದಿಲ್ಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಈ ಸಾಲಿನ 10ನೇ ತರಗತಿ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ. ಮಧ್ಯಾಹ್ನ 2 ಗಂಟೆಗೆ ಸಿಬಿಎಸ್‌ಇ ವೆಬ್‌ಸೈಟಿನಲ್ಲಿ ಫಲಿತಾಂಶ ಪ್ರಕಟಗೊಂಡಿದೆ. ಇಂದೇ 12ನೇ ತರಗತಿ ಫಲಿತಾಂಶವೂ ಪ್ರಕಟವಾಗಿದ್ದು, ಹೀಗೆ ಎರಡು ಫಲಿತಾಂಶ ಒಂದೇ ದಿನ ಪ್ರಕಟವಾದದ್ದು ಇದೇ ಮೊದಲು.
ನೊಯ್ಡಾದ ವಿದ್ಯಾರ್ಥಿ ಮಯಾಂಕ್ ಯಾದವ್ ಎಂಬಾತ 500ರಲ್ಲಿ 500 ಅಂಕ ಗಳಿಸಿ ಶೇ,100 ಅಂಕದೊಂದಿಗೆ ಪ್ರಥಮ ಸ್ಥಾನಿಯಾಗಿದ್ದಾನೆ. ಒಟ್ಟಾರೆ ಶೇ.94 ವಿದ್ಯಾರ್ಥಿಗಳು ತೇರ್ಗಡೆಯಾಗುವುದರೊಂದಿಗೆ ಸಿಬಿಎಸ್‌ಇ ಉತ್ತಮ ಫಲಿತಾಂಶ ದಾಖಲಿಸಿದೆ. ಈ ಸಲ ಬಾಲಕಿಯರು ಮೇಲ್ಗೈ ಸಾಧಿಸಿದ್ದಾರೆ. ಬಾಲಕಿಯರ ತೇರ್ಗಡೆ ಪ್ರಮಾಣ ಶೇ. 95.21 ಇದೆ. ಶೇ.93.80 ಬಾಲಕರು ತೇರ್ಗಡೆಯಾಗಿದ್ದಾರೆ.
cbse.gov.in, cbseresults.nic.in, parikshasangam.cbse.gov.in and results.cbse.nic.in. ಈ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ನೋಡಬಹುದು.
ಸಿಬಿಎಸ್‌ಇ ಫಲಿತಾಂಶ ಪ್ರಕಟ: ನೋಯ್ಡಾದ ಬಾಲಕ ಪ್ರಥಮ
