Saturday, October 1, 2022
spot_img
Homeಜಿಲ್ಲಾಲಾಡ್ಜ್‌ನಲ್ಲಿ ಭಿನ್ನ ಕೋಮಿನ ಜೋಡಿ ಪತ್ತೆ

ಲಾಡ್ಜ್‌ನಲ್ಲಿ ಭಿನ್ನ ಕೋಮಿನ ಜೋಡಿ ಪತ್ತೆ


ಬೈಂದೂರು : ಉಪ್ಪುಂದದ ಲಾಡ್ಜ್‌ ಒಂದರಲ್ಲಿ ಭಿನ್ನ ಕೋಮಿನ ಜೋಡಿ ಶುಕ್ರವಾರ ಪತ್ತೆಯಾಗಿದ್ದು, ಜೋಡಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ತೊಕ್ಕೊಟ್ಟಿನ ಗುಜರಿ ವ್ಯಾಪಾರಿ ಉಳ್ಳಾಲಬೈಲು ನಿವಾಸಿ ಅಮೀರ್‌ ಅಲಿ (45ವ.) ಎಂಬಾತ ತನ್ನದೇ ಅಂಗಡಿಯಲ್ಲಿ ನೌಕರಿಗಿರುವ 28ರ ಹರೆಯದ ಹಿಂದು ಯುವತಿಯನ್ನು ಕರೆದುಕೊಂಡು ಉಪ್ಪುಂದದ ನಂದನವನ ಎಂಬ ಲಾಡ್ಜ್‌ಗೆ ಕರೆತಂದಿದ್ದ. ಈ ವಿಷಯ ತಿಳಿದು ಹಿಂದು ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಲಾಡ್ಜ್‌ ಬಳಿ ಜಮಾಯಿಸಿದ್ದರು. ಪೊಲೀಸರು ಬಂದು ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಯುವತಿ ತಾನು ಸ್ವಇಚ್ಚೆಯಿಂದ ಬಂದಿರುವುದಾಗಿ ಹೇಳಿಕೆ ನೀಡಿದ್ದಾಳೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

Most Popular

error: Content is protected !!