Saturday, October 1, 2022
spot_img
Homeಸುದ್ದಿಅಂಬೇಡ್ಕರ್‌ ಪ್ರಾತಃಸ್ಮರಣೀಯರು - ರಮೇಶ್ ಕುಮಾರ್‌

ಅಂಬೇಡ್ಕರ್‌ ಪ್ರಾತಃಸ್ಮರಣೀಯರು – ರಮೇಶ್ ಕುಮಾರ್‌

ಕಾರ್ಕಳ : ಅಂಬೇಡ್ಕರ್ ಅವರನ್ನು ವ್ಯಕ್ತಿಯಾಗಿ ನೋಡುವುದಕ್ಕಿಂತ ಶಕ್ತಿಯಾಗಿ ಗಮನಿಸಬೇಕು. ಅವರಿಂದಾಗಿ ಭಾರತೀಯ ಸಮಾಜದಲ್ಲಿ ಮಹೋನ್ನತವಾದ ಬದಲಾವಣೆಯಾಗಿದೆ. ಸಾಮರಸ್ಯ, ಸಮಾನತೆ ಸಾರಿದ ಅಂಬೇಡ್ಕರ್‌ ಪ್ರಾತಃಸ್ಮರಣೀಯರು ಎಂದು ಉಡುಪಿ ಜಿಲ್ಲೆ ಪರಿಶಿಷ್ಟ ಜಾತಿ ವರ್ಗಗಳ ಸಹಾಯಕ ನಿರ್ದೇಶಕ ರಮೇಶ್ ಕುಮಾರ್‌ ಹೇಳಿದರು.
ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಎಸ್.ಸಿ, ಎಸ್.ಟಿ ಹಾಗೂ ಓಬಿಸಿ ಕೋಶ ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಎ. ಕೋಟ್ಯಾನ್, ಸರಕಾರ ನೀಡುತ್ತಿರುವ ಸೌಲಭ್ಯಗಳು ಫಲಾನುಭವಿಗಳಿಗೆ ತಲುಪಿದಾಗ ಮಾತ್ರ ಯೋಜನೆ ಸಾರ್ಥಕವಾಗುವುದು ಹೇಳಿದರು. ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಘಟಕದ ಸಂಚಾಲಕ ಪ್ರೊ. ಯೋಗೀಶ್ ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ವೆಂಕಟೇಶ್ ನಾಯಕ್ ಸ್ವಾಗತಿಸಿ, ಇತಿಹಾಸ ವಿಭಾಗ ಮುಖ್ಯಸ್ಥ ಸುಚಿತ್ರಾ ವಂದಿಸಿದರು. ವಿದ್ಯಾರ್ಥಿನಿ ಶ್ವೇತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!