Wednesday, August 17, 2022
spot_img
Homeಸುದ್ದಿಭೌತಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರ

ಭೌತಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರ

ಕಾರ್ಕಳ: ಉಡುಪಿ ಜಿಲ್ಲಾ ಉಪನ್ಯಾಸಕರ ವೇದಿಕೆ , ಕ್ರಿಯೇಟಿವ್ ಪ.ಪೂ.ಕಾಲೇಜು ಕಾರ್ಕಳ ಹಾಗೂ ತ್ರಿಷಾ ಪ.ಪೂ.ಕಾಲೇಜು ಉಡುಪಿ ಇವರ ಸಹಭಾಗಿತ್ವದಲ್ಲಿ 2022ನೇ ಸಾಲಿನ ಭೌತಶಾಸ್ತ್ರ ಕಾರ್ಯಾಗಾರ ಉಡುಪಿ ಸಂತೆಕಟ್ಟೆ ತ್ರಿಷಾ ಪ.ಪೂ .ಕಾಲೇಜಿನಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಸರಕಾರಿ ಪ.ಪೂ.ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಆದಿತ್ಯ ರಾವ್, ಭೌತಶಾಸ್ತ್ರದಲ್ಲಿ ಫೋರ್ಸ್ ,ಟಾರ್ಕ್ ಹಾಗೂ ಆಂಗ್ಯುಲರ್ ಮುಮೆಂಟಮ್‌ನ ಆಂತರಿಕ ಸಂಬಂಧದ ಬಗ್ಗೆ ವಿವಿಧ ಮಾಡೆಲ್‌ಗಳ ಪ್ರಾತ್ಯಕ್ಷಿಕೆ ಮತ್ತು ಉದಾಹರಣೆ ನೀಡಿ ಮಾಹಿತಿ ಒದಗಿಸಿದರು.
ಕಲಿಕೋಪಕರಣಗಳ ಮೂಲಕ ಭೌತಶಾಸ್ತ್ರವನ್ನು ಅತ್ಯಂತ ಸರಳವಾಗಿ ಕಲಿಸಬಹುದು.ಭೌತಶಾಸ್ತ್ರ ಮನುಷ್ಯನ ಜೀವನದೊಂದಿಗೆ ಹಾಸುಹೊಕ್ಕಾಗಿದೆ ಎಂದು ಇನ್ನೋರ್ವ ಸಂಪನ್ಮೂಲ ವ್ಯಕ್ತಿ ವಿವೇಕ ಪ.ಪೂ.ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ರವಿ ಕಾರಂತ್ ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಮಾರುತಿ ಆನ್ಲೈನ್ ಮೂಲಕ ಶುಭ ಹಾರೈಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಡಾ.ಗಣನಾಥ ಶೆಟ್ಟಿ , ಕಠಿಣ ವಿಷಯವೆನಿಸಿದ ಭೌತಶಾಸ್ತ್ರವನ್ನು ಇಂತಹ ಕಾರ್ಯಾಗಾರದ ಮುಖಾಂತರ ಪರಸ್ಪರ ಚರ್ಚಿಸಿ ಸರಳೀಕರಿಸಿ ವಿದ್ಯಾರ್ಥಿಗಳಿಗೆ ಬೋಧಿಸಲು ಅನುಕೂಲವಾಗುತ್ತದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ತ್ರಿಷಾ ಪ.ಪೂ.ಕಾಲೇಜಿನ ಪ್ರಾಂಶುಪಾಲ ಸ್ಟ್ಯಾನಿ ಲೋಬೋ ಪಠ್ಯಪುಸ್ತಕದ ವಿಚಾರಗಳನ್ನು ಕ್ರಿಯಾಶೀಲ ರೀತಿಯಲ್ಲಿ ಬೋಧಿಸುವಂತಾಗಬೇಕು.ಅದಕ್ಕಾಗಿ ಉಪನ್ಯಾಸಕರು ಪಠ್ಯದ ಬಗ್ಗೆ ಆಳವಾದ ಅಧ್ಯಯನ ಮತ್ತು ಪೂರ್ವ ತಯಾರಿ ನಡೆಸಿ ತರಗತಿಯಲ್ಲಿ ಪ್ರಸ್ತುತಪಡಿಸಬೇಕೆಂದು ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲಾ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆಯ ಗೌರವಾಧ್ಯಕ್ಷ ಲಕ್ಷ್ಮೀ ನಾರಾಯಣ ಛಾತ್ರ ಹಾಗೂ ಅಧ್ಯಕ್ಷ ವಿಘ್ನೇಶ್ವರ ಭಟ್ ಉಪಸ್ಥಿತರಿದ್ದರು.ಉಡುಪಿ ಜಿಲ್ಲೆಯ ವಿವಿಧ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರು ಭಾಗವಹಿಸಿದರು.
ಉಡುಪಿ ಜಿಲ್ಲಾ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆ ಕಾರ್ಯದರ್ಶಿ ಉಮಾಪತಿ ಸಿ.ಎಸ್. ಸ್ವಾಗತಿಸಿದರು. ಕೋಶಾಧಿಕಾರಿ ಸದಾನಂದ ವಂದಿಸಿದರು. ಉಪನ್ಯಾಸಕ ಲೋಹಿತ್.ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!