Saturday, October 1, 2022
spot_img
Homeಸುದ್ದಿಕಾಲೇಜು ವಿದ್ಯಾರ್ಥಿಗಳ ಕಿಸ್ಸಿಂಗ್‌ ವೀಡಿಯೊ ವೈರಲ್‌

ಕಾಲೇಜು ವಿದ್ಯಾರ್ಥಿಗಳ ಕಿಸ್ಸಿಂಗ್‌ ವೀಡಿಯೊ ವೈರಲ್‌

ಮಂಗಳೂರು : ಕೆಲವು ಕಾಲೇಜು ವದ್ಯಾರ್ಥಿಗಳು ಕೊಠಡಿಯೊಂದರಲ್ಲಿ ಕಿಸ್ಸಿಂಗ್‌ನಲ್ಲಿ ತೊಡಗಿರುವ ವೀಡಿಯೊ ಒಂದು ವೈರಲ್ ಆಗಿದ್ದು, ಈ ಸಂಬಂಧ ಓರ್ವ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳು ಖಾಸಗಿ ಕೊಠಡಿಯಲ್ಲಿ ಕಿಸ್ಸಿಂಗ್‌ನಲ್ಲಿ ತೊಡಗಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದರು. ಮಂಗಳೂರು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಇದು ಎನ್ನುವುದು ವಿದ್ಯಾರ್ಥಿಗಳ ಸಮವಸ್ತ್ರದಿಂದಾಗಿ ಗೊತ್ತಾಗಿದೆ. ಕಿಸ್ಸಿಂಗ್‌ನಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣ ಪಡೆಯುತ್ತಿದ್ದರು ಎನ್ನಲಾಗಿದೆ.
ಕೆಲ ವಿದ್ಯಾರ್ಥಿಗಳ ಮಧ್ಯೆ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಗೆ ಕಿಸ್ ಕೊಡ್ತಾ ಇರುವ ವಿಡಿಯೋ ಚಿತ್ರೀಕರಿಸಲಾಗಿದೆ. ಯಾವುದೋ ಖಾಸಗಿ ಕೊಠಡಿಯಲ್ಲಿ ಅಶ್ಲೀಲ ವಿಡಿಯೋ ಮಾಡಲಾಗಿದೆ.
ಖಾಸಗಿ ಕಾಲೇಜು ಆಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ವಿಡಿಯೋದಲ್ಲಿ ಮೂವರು ಯುವಕರು ಮತ್ತು ಮೂವರು ವಿದ್ಯಾರ್ಥಿನಿಯರಿದ್ದು, ಯಾರೋ ಒಬ್ಬರು ವಿಡಿಯೋ ಮಾಡಿದ್ದಾರೆ. ಮೂವರು ವಿದ್ಯಾರ್ಥಿನಿಯರು ಕಾಲೇಜು ಯೂನಿಫಾರಂ ಮತ್ತು ಐಡಿ ಕಾರ್ಡ್ ಹಾಕಿಕೊಂಡಿದ್ದಾರೆ. ಯುವಕರು ಯೂನಿಫಾರಂನಲ್ಲಿಲ್ಲ.
20 ಸೆಕೆಂಡ್‌ಗಳ ಈ ವಿಡಿಯೋವನ್ನ ಯಾವುದೋ ಖಾಸಗಿ ರೂಮ್‌ನಲ್ಲಿ ತೆಗೆಯಲಾಗಿದೆ. ಮೇಲ್ನೋಟಕ್ಕೆ ಯುವಕರು ವಾಸ್ತವ್ಯ ಇರುವ ಕೊಠಡಿಯಂತೆ ಕಾಣುತ್ತಿದ್ದು, ವಿದ್ಯಾರ್ಥಿನಿಯರು ಅಲ್ಲಿಗೆ ತೆರಳಿರುವ ಸಾಧ್ಯತೆ ಇದೆ. ಮಂಗಳೂರು ಪೊಲೀಸರು ವಿದ್ಯಾರ್ಥಿನಿಯರು ‌ಮತ್ತು ಆ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!