ಲಖನೌ: ಉತ್ತರ ಪ್ರದೇಶದ ಮೊರದಾಬಾದ್‌ನ ವೈದ್ಯರೊಬ್ಬರು ತಾನು ಜೀವಮಾನವಿಡೀ ದುಡಿದು ಗಳಿಸಿದ ಸುಮಾರು 600 ಕೋ.ರೂ. ಆಸ್ತಿಯನ್ನು ಉತ್ತರ ಪ್ರದೇಶ ಸರಕಾರಕ್ಕೆ ದಾನ ಮಾಡಿ ಅಚ್ಚರಿಯುಂಟು ಮಾಡಿದ್ದಾರೆ.
ಡಾ| ಅರವಿಂದ ಕುಮಾರ್ ಗೋಯಲ್ ಅವರೇ ಈ ಮಹಾದಾನಿ ವೈದ್ಯ. ಬಡವರಿಗೆ ನೆರವಾಗಬೇಕೆಂಬ ಸಂಕಲ್ಪದಿಂದ ತಾನು ಸಂಪೂರ್ಣ ಆಸ್ತಿಯನ್ನು ಸರಕಾರಕ್ಕೆ ಕೊಟ್ಟಿದ್ದೇನೆ ಎಂದು ಗೋಯಲ್ ಹೇಳಿದ್ದಾರೆ. 25 ವರ್ಷಗಗಳ ಹಿಂದೆಯೇ ಅವರು ತನ್ನೆಲ್ಲ ಆಸ್ತಿಯನ್ನು ದಾನ ಮಾಡುವ ನಿರ್ಧಾರ ಕೈಗೊಂಡಿದ್ದಾರಂತೆ. ಸುಮಾರು 50 ವರ್ಷ ವೈದ್ಯರಾಗಿ ದುಡಿದು ಅವರು ಈ ಆಸ್ತಿ ಸಂಪಾದಿಸಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ ಮೊರದಾಬಾದ್ ಜಿಲ್ಲೆಯ 50 ಊರುಗಳನ್ನು ದತ್ತು ಸ್ವೀಕರಿಸಿ ಜನರಿಗೆ ಎಲ್ಲ ಸೌಲಭ್ಯಗಳನ್ನು ವೈದ್ಯ ದೇವರು ನೀಡಿದ್ದರು. ನಾಲ್ಕು ಸಲ ಅವರಿಗೆ ರಾಷ್ಟ್ರಪತಿಗಳಿಂದ ಗೌರವ ಸಂದಾಯವಾಗಿದೆ. ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯಿದ್ದು, ಅವರ ಒಪ್ಪಿಗೆಯಿಂದಲೇ ಸರ್ವ ಸಂಪತ್ತನ್ನು ಸರಕಾರಕ್ಕೆ ಕೊಟ್ಟಿದ್ದಾರೆ.
600 ಕೋ.ರೂ. ಆಸ್ತಿಯನ್ನು ಸರಕಾರಕ್ಕೆ ದಾನ ಕೊಟ್ಟ ಡಾಕ್ಟರ್!
