Saturday, October 1, 2022
spot_img
Homeಸುದ್ದಿಮತ್ತೆ ಸಂಪುಟ ವಿಸ್ತರಣೆ ಕುತೂಹಲ

ಮತ್ತೆ ಸಂಪುಟ ವಿಸ್ತರಣೆ ಕುತೂಹಲ

*ಜು.25-26 ಬೊಮ್ಮಾಯಿ ದಿಲ್ಲಿ ಭೇಟಿ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜು.25 ಮತ್ತು 26ರಂದು ದಿಲ್ಲಿಗೆ ಹೋಗಲಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಸಂಪುಟ ವಿಸ್ತರಣೆ ಕುರಿತಾದ ಚರ್ಚೆ ಶುರುವಾಗಿದೆ.
ಸ್ವತಹ ಸಿಎಂ ಅವಕಾಶ ಸಿಕ್ಕಿದರೆ ಪಕ್ಷದ ವರಿಷ್ಠರ ಬಳಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸುವುದಾಗಿ ಹೇಳಿದ್ದಾರೆ.
ರಾಷ್ಟ್ರಪತಿ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಸಿಎಂ ದಿಲ್ಲಿ ಪ್ರಯಾಣದ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಎರಡು ದಿನ ದಿಲ್ಲಿಯಲ್ಲಿರುವುದರಿಂದ ರಾಜ್ಯದ ಕೆಲವು ಮಹತ್ವದ ವಿಚಾರಗಳು ನಿರ್ಧಾರವಾಗುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.
ಸಂಪುರ ವಿಸ್ತರಣೆ ಹಾಗೂ ಅದರ ಬೆನ್ನಿಗೆ ಬಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರಗಳು ಈಗ ಹೆಚ್ಚು ಚರ್ಚೆಯಲ್ಲಿವೆ.
ಈ ಸಲ ಸಂಪುಟ ವಿಸ್ತರಣೆಯಾಗದಿದ್ದರೆ ಕಷ್ಟ ಎನ್ನಲಾಗುತ್ತಿದೆ. ಇನ್ನು ಚುನಾವಣೆಗೆ ಬರೀ 10 ತಿಂಗಳು ಮಾತ್ರ ಬಾಕಿ ಉಳಿದಿದೆ. ಈಗ ಸಂಪುಟ ವಿಸ್ತರಣೆ ಮಾಡದಿದ್ದರೆ ಮುಂದೆ ಅವಕಾಶ ಸಿಗುವುದಿಲ್ಲ, ಒಂದು ವೇಳೆ ಮಾಡಿದರೂ ಅದರಿಂದ ಯಾರಿಗೂ ಪ್ರಯೋಜನವಿಲ್ಲ ಎಂಬ ಭಾವ ನಾಯಕರಲ್ಲಿದೆ.

LEAVE A REPLY

Please enter your comment!
Please enter your name here

Most Popular

error: Content is protected !!