ಬೆಂಗಳೂರು : ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿ ತನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಹಾಸನ ಸಂಸದ ರೇವಣ್ಣ ತಳ್ಳಿಹಾಕಿದ್ದಾರೆ.
ಇತ್ತೀಚೆಗೆ ಹಾಸನ ಜಿಲ್ಲೆಯ ವೀರಾಪುರದಲ್ಲಿ ಆನೆಗೆ ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿ ದಂತಗಳನ್ನು ತೆಗೆದ ಪ್ರಕರಣದಲ್ಲಿ ಹಂತಕರನ್ನು ಪ್ರಜ್ವಲ್ ರೇವಣ್ಣ ರಕ್ಷಿಸುತ್ತಿದ್ದಾರೆ ಎಂದು ಮನೇಕಾ ಗಾಂಧಿ ಆರೋಪಿಸಿ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದರು.
ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈ ಬಗ್ಗೆ ಗಂಭೀರವಾದ ತನಿಖೆ ನಡೆಸಲಿ ಎಂದು ಪ್ರಜ್ವಲ್ ಸವಾಲು ಹಾಕಿದ್ದಾರೆ. ಈ ವಿಷಯವನ್ನು ವಿವರವಾಗಿ ಅಧ್ಯಯನ ಮಾಡಿದ ಬಳಿಕ ಮನೇಕಾ ಗಾಂಧಿ ಅವರು ವಿಷಯ ಪ್ರಸ್ತಾಪಿಸಬಹುದಾಗಿತ್ತು ಎಂದು ಹೇಳಿರುವ ಪ್ರಜ್ವಲ್, ತನಗೆ ಆನೆ ಸಾವನ್ನಪ್ಪಿದ್ದ ಮಾಹಿತಿ ತಿಳಿದಿತ್ತು. ಆದರೆ ದಂತ ತೆಗೆದು ಹೂತು ಹಾಕಿರುವ ಮಾಹಿತಿ ತಿಳಿದಿರಲಿಲ್ಲ ಎಂದಿದ್ದಾರೆ.
ಆನೆಯ ದಂತ ತೆಗೆದದ್ದು ಗೊತ್ತಿರಲಿಲ್ಲ: ಪ್ರಜ್ವಲ್ ರೇವಣ್ಣ
Recent Comments
ಕಗ್ಗದ ಸಂದೇಶ
on