Sunday, October 2, 2022
spot_img
Homeಸ್ಥಳೀಯ ಸುದ್ದಿವಸತಿ ಯೋಜನೆಯಡಿ ಮನೆಗಳ ಮಂಜೂರು : ಕಾರ್ಕಳ - 960, ಹೆಬ್ರಿ - 310

ವಸತಿ ಯೋಜನೆಯಡಿ ಮನೆಗಳ ಮಂಜೂರು : ಕಾರ್ಕಳ – 960, ಹೆಬ್ರಿ – 310

ಕಾರ್ಕಳ : ವಸತಿ ಯೋಜನೆಯಡಿ ಕಾರ್ಕಳ ತಾಲೂಕಿನ 960 ಹಾಗೂ ಹೆಬ್ರಿ ತಾಲೂಕಿನ 310 ಕುಟುಂಬಗಳಿಗೆ ವಸತಿ ಯೋಜನೆಯಡಿ ಮನೆಗಳ ಮಂಜೂರಾಗಿದ್ದು, ಆದೇಶ ಪ್ರತಿ ಈಗಾಗಲೇ ನೀಡಲಾಗಿದೆ. ಬಹುತೇಕ ಮನೆಗಳ ಕಾಮಗಾರಿ ಪ್ರಾರಂಭಗೊಂಡು ಪ್ರಗತಿಯಲ್ಲಿದೆ. ಕಾರ್ಕಳ ತಾಲೂಕಿನಲ್ಲಿ ಬಸವ ವಸತಿ ಯೋಜನೆಯಡಿ 728 ಮತ್ತು ಡಾ. ಬಿ. ಆರ್.‌ ಅಂಬೇಡ್ಕರ್‌ ಗ್ರಾಮೀಣ ವಸತಿ ಯೋಜನೆಯಲ್ಲಿ 232 ಮನೆಗಳು ಮಂಜೂರಾಗಿದ್ದು ಒಟ್ಟು 960 ಕುಟುಂಬಗಳಿಗೆ ಆದೇಶ ಪ್ರತಿ ನೀಡಲಾಗಿದೆ. ಕುಕ್ಕುಂದೂರು ಪಂಚಾಯತ್‌ಗೆ ಬಸವ ವಸತಿ ಯೋಜನೆಯಲ್ಲಿ 38, ಡಾ. ಬಿ.ಆರ್.‌ ಅಂಬೇಡ್ಕರ್‌ ಗ್ರಾಮೀಣ ವಸತಿ ಯೋಜನೆಯಲ್ಲಿ 12, ಬೈಲೂರು 23 -7, ಬೆಳ್ಮಣ್‌ 30 – 10, ಬೋಳಾ 23 -7, ದುರ್ಗಾ 23-7, ಯರ್ಲಪಾಡಿ 23-7, ಹಿರ್ಗಾನ 23-7, ಈದು 30-10, ಇನ್ನಾ 23-7, ಇರ್ವತ್ತೂರು 23-7, ಕಡ್ತಲ 23-7, ಕಲ್ಯಾ 23-7, ಕಾಂತಾವರ 23-7, ಕೆರ್ವಾಶೆ 23-7, ಮಾಳ 30-10, ಮರ್ಣೆ 30-10,‌ ಮಿಯ್ಯಾರು 30-10, ಮುಡಾರು 30-10, ಮುಂಡ್ಕೂರು 30-10, ನಲ್ಲೂರು 30-10, ನಂದಳಿಕೆ 23-7, ನೀರೆ 30-10, ನಿಟ್ಟೆ 38-12, ಪಳ್ಳಿ 30-10, ರೆಂಜಾಳ 23-7, ಸಾಣೂರು 30-10, ಶಿರ್ಲಾಲು 23-7 ಮನೆಗಳು ಮಂಜೂರಾಗಿದೆ.
ಹೆಬ್ರಿ ತಾಲೂಕಿನಲ್ಲಿ 235 ಮನೆಗಳು ಬಸವ ವಸತಿ ಯೋಜನೆಯಡಿ, 75 ಮನೆಗಳು ಡಾ. ಬಿ. ಆರ್‌. ಅಂಬೇಡ್ಕರ್‌ ನಿವಾಸ್‌ ಯೋಜನೆಯಲ್ಲಿ ಒಟ್ಟು 310 ಮನೆಗಳು ಮಂಜೂರಾಗಿದೆ. ಕುಚ್ಚೂರು ಬಸವ ವಸತಿ ಯೋಜನೆಯಲ್ಲಿ 23, ಡಾ. ಬಿ. ಆರ್‌ ಅಂಬೇಡ್ಕರ್‌ ನಿವಾಸ್‌ ಯೋಜನೆಯಲ್ಲಿ 7, ಮುದ್ರಾಡಿ 30-10, ನಾಡ್ಪಾಲು 23-7, ಶಿವಪುರ 23-7, ವರಂಗ 30-10, ಚಾರಾ 23-7, ಬೆಳ್ವೆ 30-10, ಮಡಾಮಕ್ಕಿ 23-7 ಮತ್ತು ಹೆಬ್ರಿ 30-10 ಗ್ರಾಮ ಪಂಚಾಯತಗಳಿಗೆ ಮನೆಗಳು ಮಂಜೂರಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!