ತಿರುವನಂತಪುರ: ನೀಟ್ ಪರೀಕ್ಷೆ ಬರೆಯಲು ಬಂದ ಹೆಣ್ಣುಮಕ್ಕಳ ಒಳ ಉಡುಪು ಬಿಚ್ಚಿಸಿದ ಘಟನೆಗೆ ಸಂಬಂಧಿಸಿದಂತೆ ಕೇರಳ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಕೊಲ್ಲಂ ಜಿಲ್ಲೆಯ ಆಯುರ್ನ ನೀಟ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದಾಗ ಪರೀಕ್ಷೆಯ ನಿಯಮಗಳನ್ನು ತೋರಿಸಿ ಬ್ರಾ ಬಿಚ್ಚಿಸಿದ್ದಾರೆ ಎಂದು ಯುವತಿಯೊಬ್ಬಳು ದೂರು ನೀಡಿದ್ದಳು. ಅನಂತರ ಇನ್ನೂ ಕೆಲವು ಯುವತಿಯರು ನೀಟ್ ಪರೀಕ್ಷಾ ಕೇಂದ್ರಗಳಲ್ಲಿ ತಮ್ಮ ಒಳ ಉಡುಪು ಬಿಚ್ಚಿಸಲಾಗಿದೆ ಎಂದು ದೂರು ನೀಡಿದ್ದಾರೆ. ಇದೀಗ ರಾಷ್ಟ್ರೀಯ ಮಟ್ಟದ ವಿವಾದವಾಗುತ್ತಿದ್ದಂತೆ ಕೇರಳ ಪೊಲೀಸರು ಯುವತಿಯ ದೂರನ್ನು ಆಧರಿಸಿ ಕೇಸು ದಾಖಲಿಸಿಕೊಂಡಿದ್ದಾರೆ.
ನೀಟ್ ಪರೀಕ್ಷೆಗೆ ಹಾಜರಾಗುವವರ ಮೈಮೇಲೆ ಯಾವುದೇ ಲೋಹದ ವಸ್ತು ಇರಬಾರದು ಎಂಬ ನಿಯಮವಿದೆ. ಬ್ರಾದಲ್ಲಿ ಲೋಹದ ಗುಂಡಿಗಳಿರುವುದರಿಂದ ಅದನ್ನು ಬಿಚ್ಚಿ ಪರೀಕ್ಷೆ ಬರೆಯಲು ಸೂಚಿಸಿದ್ದಾರೆ ಎಂದು ಯುವತಿಯರು ಆರೋಪಿಸಿದ್ದಾರೆ. ಒಳ ಉಡುಪು ಬಿಚ್ಚಿಸಿದವರನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನೀಟ್ ಪರೀಕ್ಷೆಗೆ ಒಳ ಉಡುಪು ಬಿಚ್ಚಿಸಿದ ಪ್ರಕರಣ: ಕೇಸು ದಾಖಲು
Recent Comments
ಕಗ್ಗದ ಸಂದೇಶ
on