Sunday, October 2, 2022
spot_img
Homeಜಿಲ್ಲಾದುಬೈನಿಂದ ಮಂಗಳೂರಿಗೆ ಬಂದ ವ್ಯಕ್ತಿಗೆ ಮಂಕಿಪಾಕ್ಸ್‌ ದೃಢ : 35 ಮಂದಿ ಪ್ರಯಾಣಿಕರು ಐಸೋಲೇಷನ್‌

ದುಬೈನಿಂದ ಮಂಗಳೂರಿಗೆ ಬಂದ ವ್ಯಕ್ತಿಗೆ ಮಂಕಿಪಾಕ್ಸ್‌ ದೃಢ : 35 ಮಂದಿ ಪ್ರಯಾಣಿಕರು ಐಸೋಲೇಷನ್‌

ಮಂಗಳೂರು : ಮಂಗಳವಾರ ದುಬೈನಿಂದ ಮಂಗಳೂರಿಗೆ ಬಂದ ವಿಮಾನದಲ್ಲಿ ಓರ್ವನಿಗೆ ಮಂಕಿಪಾಕ್ಸ್‌ ದೃಢಪಟ್ಟಿದೆ. 191 ಮಂದಿ ಪ್ರಯಾಣಿಕರಿದ್ದ ವಿಮಾನದಲ್ಲಿ ದ. ಕ. ಜಿಲ್ಲೆಯ 15, ಉಡುಪಿಯ 6, ಕಾಸರಗೋಡುವಿನ 13 ಮತ್ತು ಕಣ್ಣೂರಿನ ಒಬ್ಬರಿದ್ದರು. ಇವರಲ್ಲಿ ಕೇರಳದ ಒರ್ವರಿಗೆ ಮಂಕಿಪಾಕ್ಸ್‌ ದೃಢಪಟ್ಟಿದೆ, ಅವರು ಏರ್‌ಪೋರ್ಟ್‌ನಿಂದ ಕೇರಳಕ್ಕೆ ಪ್ರಯಾಣಿಸಿದ್ದಾರೆ. ಕಣ್ಣೂರು ಮೆಡಿಕಲ್‌ ಕಾಲೇಜಿನಲ್ಲಿ ತಪಾಸಣೆ ನಡೆಸಿದ ಬಳಿಕ ಮಂಕಿಪಾಕ್ಸ್‌ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆತನೊಂದಿಗೆ ಪ್ರಯಾಣಿಸಿದ್ದ 35 ಮಂದಿಯನ್ನು ಐಸೋಲೇಷನ್‌ಗೆ ಒಳಪಡಿಸಲಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!